alex Certify
ಕನ್ನಡ ದುನಿಯಾ       Mobile App
       

Kannada Duniya

ಮಕರ ಸಂಕ್ರಾಂತಿಯಂದು ಅವಶ್ಯವಾಗಿ ಮಾಡಿ ಈ 4 ಕೆಲಸ

ಈ ಬಾರಿ ಎರಡು ದಿನ ಮಕರ ಸಂಕ್ರಾಂತಿ ಬಂದಿದೆ. ಜನವರಿ 14 ಹಾಗೂ ಜನವರಿ 15 ಎರಡೂ ದಿನ ಮಕರ ಸಂಕ್ರಾಂತಿ ಆಚರಣೆಗೆ ಮುಹೂರ್ತವಿದೆ. ಬಹುತೇಕರು ಜನವರಿ 14ರಂದು ಮಕರ ಸಂಕ್ರಾಂತಿ ಆಚರಣೆ ಮಾಡುತ್ತಿದ್ದಾರೆ. ಈ ಮಕರ ಸಂಕ್ರಾಂತಿಯಂದು ಕೆಲವೊಂದು ಕೆಲಸಗಳನ್ನು ಅವಶ್ಯವಾಗಿ ಮಾಡಬೇಕು. ಇದು ಆರೋಗ್ಯ ಹಾಗೂ ಸಂತೋಷ ವೃದ್ಧಿಗೆ ಸಹಕಾರಿ.

ಸೂರ್ಯನಿಗೆ ಜಲ ಅರ್ಪಿಸಿ : ಮಕರ ಸಂಕ್ರಾಂತಿಯಂದು ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಹಾಗಾಗಿಯೇ ಇದಕ್ಕೆ ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಮಕರ ಸಂಕ್ರಾಂತಿಗೆ ವಿಶೇಷ ಮಹತ್ವವಿದೆ. ಸೂರ್ಯ ರಾಶಿ ಬದಲಾವಣೆ ಮಾಡುವುದ್ರಿಂದ ಪ್ರತಿಯೊಂದು ರಾಶಿ ಮೇಲೂ ಇದು ಪ್ರಭಾವ ಬೀರುತ್ತದೆ. ಯಾರ ಜಾತಕದಲ್ಲಿ ಸೂರ್ಯ ಅಶುಭ ಸ್ಥಾನದಲ್ಲಿದ್ದಾನೋ ಅವರು ಮಕರ ಸಂಕ್ರಾಂತಿಯಂದು ಸೂರ್ಯನಿಗೆ ಜಲವನ್ನು ಅರ್ಪಿಸಬೇಕು.

ಕೆಲ ಸಮಯ ಸೂರ್ಯನ ಕಿರಣಕ್ಕೆ ಮೈ ಒಡ್ಡಿ : ಮಕರ ಸಂಕ್ರಾಂತಿ ನಂತ್ರ ಚಳಿ ಕಡಿಮೆಯಾಗ್ತಾ ಬರುತ್ತದೆ. ಈ ದಿನದ ಸೂರ್ಯನ ಕಿರಣಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗಾಗಿ ಕೆಲ ಕಾಲ ಸೂರ್ಯನ ಕಿರಣಗಳಿಗೆ ಮೈ ಒಡ್ಡಬೇಕು.

ಎಳ್ಳು –ಬೆಲ್ಲ ತಿನ್ನಿ : ಚಳಿಗಾಲದಲ್ಲಿ ಎಳ್ಳು-ಬೆಲ್ಲ ಸೇವನೆ ಒಳ್ಳೆಯದು. ಇದು ದೇಹವನ್ನು ಚಳಿಯಿಂದ ರಕ್ಷಿಸಿ ಬೆಚ್ಚಗಿನ ಅನುಭವ ನೀಡುತ್ತದೆ. ಎಳ್ಳು-ಬೆಲ್ಲ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮಕರ ಸಂಕ್ರಾಂತಿಯಂದು ಎಳ್ಳು ಬೆಲ್ಲ ಸೇವನೆ ಒಂದು ಪರಂಪರೆ ರೂಪದಲ್ಲಿ ನಡೆದು ಬಂದಿದೆ.

ಎಳ್ಳು ಹಾಗೂ ಬೆಲ್ಲ ತುಂಬಾ ಉಷ್ಣವಾಗಿರುವುದ್ರಿಂದ ಉಷ್ಣ ಪ್ರಕೃತಿ ಶರೀರದವರು ಇದನ್ನು ಸೇವನೆ ಮಾಡದಿರುವುದು ಒಳ್ಳೆಯದು.

ಎಳ್ಳು ದಾನ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂಕ್ರಾಂತಿಯಂದು ಎಳ್ಳನ್ನು ದಾನವಾಗಿ ನೀಡಬೇಕು. ಇದು ಒಳ್ಳೆಯ ಫಲ ನೀಡುತ್ತದೆ. ಜಾತಕದಲ್ಲಿರುವ ದೋಷ ನಿವಾರಣೆಗೆ ಇದು ಒಳ್ಳೆ ಉಪಾಯ. ಪ್ರತಿಯೊಂದು ರಾಶಿಯವರು ಕೂಡ ಎಳ್ಳನ್ನು ದಾನದ ರೂಪದಲ್ಲಿ ನೀಡಬೇಕು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...