alex Certify
ಕನ್ನಡ ದುನಿಯಾ       Mobile App
       

Kannada Duniya

ಐಸ್ ಕ್ರೀಂ ಟೇಸ್ಟಿಂಗ್ ಆಫೀಸರ್ ಆಗಬೇಕಾ? ಈಗಲೇ ಅರ್ಜಿ ಸಲ್ಲಿಸಿ

ಐಸ್ ಕ್ರೀಂ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ….ಅದರಲ್ಲೂ ಈ ಬಿರುಬೇಸಿಗೆಯಲ್ಲಿ ಐಸ್ ಕ್ರೀಮ್ ಎಲ್ಲರಿಗೂ ಇಷ್ಟವೇ. ಇನ್ನು ಈ ಐಸ್ ಕ್ರೀಂ ಟೇಸ್ಟ್ ನೋಡೋ ಕೆಲಸವೇ ಸಿಕ್ಕಿಬಿಟ್ಟರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ…? ಹೌದು, ಐಸ್ ಕ್ರೀಂ ಬ್ರಾಂಡ್ ಒಂದಕ್ಕೆ ಟೇಸ್ಟ್ ಚೆಕ್ ಮಾಡೋ ಆಫೀಸರ್ ಬೇಕಾಗಿದ್ದಾರಂತೆ. ಯಾರು ಬೇಕಾದರೂ ಅಪ್ಲೈ ಮಾಡಬಹುದಂತೆ.

ಪ್ರಸಿದ್ಧ ಐಸ್ ಕ್ರೀಂ ಬ್ರಾಂಡ್ ಹ್ಯಾವ್ ಮೋರ್ ಗೆ ಚೀಫ್ ಟೇಸ್ಟಿಂಗ್ ಆಫೀಸರ್ ಬೇಕಾಗಿದ್ದಾರೆ. ಜೊತೆಗೆ ಯಾರು ಬೇಕಾದರೂ ಈ ಕೆಲಸಕ್ಕೆ ಅರ್ಜಿ ಹಾಕಬಹುದು. ಇದಕ್ಕೆ ಬೇಕಾಗಿರೋ ಅರ್ಹತೆ ಎಂದರೆ ನಿಮ್ಮ ನಾಲಿಗೆಯಲ್ಲಿ ಚುರುಕಾದ ಟೇಸ್ಟ್ ಬಡ್ಸ್ ಇದ್ದರೆ ಸಾಕು.

ಅಲ್ಲದೇ ಈ ಕೆಲಸಕ್ಕೆ 40 ಸಾವಿರ ರೂ. ಸಂಬಳ ನೀಡಲಾಗುತ್ತದೆ. ಕೆಲಸಕ್ಕೆ ಅರ್ಜಿ ಹಾಕಲು ಮೇ 20 ಕೊನೆ ದಿನ. ಹಾಕಬಯಸುವವರು ಹಾವ್ ಮೋರ್ ಡಾಟ್ ಕಾಮ್ (havmor.com)ವೆಬ್ ಸೈಟ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...