alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್..! ಮುಂದಿನ ತಿಂಗಳು 30 ಸಾವಿರದಷ್ಟು ಹೆಚ್ಚಳವಾಗಲಿದೆ ವಾಹನಗಳ ಬೆಲೆ

ವಾಹನ ಪ್ರಿಯರಿಗೆ ಶಾಕಿಂಗ್ ನ್ಯೂಸ್. ಮಹೀಂದ್ರ ಆ್ಯಂಡ್ ಮಹೀಂದ್ರಾ ಕಂಪನಿಯ ವಾಹನಗಳು ಮುಂದಿನ ತಿಂಗಳಿನಿಂದ ದುಬಾರಿಯಾಗಲಿವೆ. ವಾಹನಗಳ ಬೆಲೆ 30 ಸಾವಿರದಷ್ಟು ಏರಿಕೆಯಾಗಲಿದೆ. ಸರಕು ಬೆಲೆಗಳ ಹೆಚ್ಚಳದ ಕಾರಣ ವಾಹನದ ಬೆಲೆ ಏರಿಕೆಗೆ ಕಂಪನಿ ನಿರ್ಧರಿಸಿದೆ.

ವಾಹನಗಳ ಸರಕು ಬೆಲೆಯಲ್ಲಿ ಹೆಚ್ಚಳವಾಗಿದೆ. ಹಾಗಾಗಿ ಕಂಪನಿ ವಾಹನದ ಬೆಲೆಯನ್ನು ಮುಂದಿನ ತಿಂಗಳು ಶೇಕಡಾ 2 ರಷ್ಟು ಹೆಚ್ಚಿಸಲಿದೆ ಎಂದು ಮಹೀಂದ್ರ ಆ್ಯಂಡ್ ಮಹೀಂದ್ರಾ ಕಂಪನಿ ಚೇರ್ಮೆನ್ ರಾಜನ್ ಹೇಳಿದ್ದಾರೆ. ಕಂಪನಿ ಎಕ್ಸ್ ಯುವಿ 500,ಸ್ಕಾರ್ಪಿಯೋ, ಟಿಯುವಿ 100 ವಾಹನವನ್ನು ಮಾರಾಟ ಮಾಡುತ್ತದೆ.

ಟಾಟಾ ಮೋಟರ್ಸ್ ಕೂಡ ಈಗಾಗಲೇ ಬೆಲೆ ಏರಿಕೆ ಬಗ್ಗೆ ಸೂಚನೆ ನೀಡಿದೆ. ಆಗಸ್ಟ್ ತಿಂಗಳಿನಿಂದ ಶೇಕಡಾ 2.2 ರಷ್ಟು ಬೆಲೆ ಏರಿಕೆ ಮಾಡುವುದಾಗಿ ಟಾಟಾ ಮೋಟರ್ಸ್ ಹೇಳಿದೆ. 2018 ರಲ್ಲಿ ಮಹೀಂದ್ರ ಆ್ಯಂಡ್ ಮಹೀಂದ್ರಾ ಕಂಪನಿ ವಾಹನಗಳ ಖರೀದಿಯಲ್ಲಿ ಏರಿಕೆಯಾಗಿದೆಯಂತೆ. ಶೇಕಡಾ 26ರಷ್ಟು ವಾಹನ ಮಾರಾಟದಲ್ಲಿ ಹೆಚ್ಚಳವಾಗಿದ್ದು, ಕಳೆದ ತಿಂಗಳು 45,155 ವಾಹನ ಮಾರಾಟವಾಗಿದೆ ಎಂದು ಕಂಪನಿ ಹೇಳಿದೆ. ಕಳೆದ ಜೂನ್ ತಿಂಗಳಿನಲ್ಲಿ 35,759 ವಾಹನ ಮಾರಾಟವಾಗಿತ್ತಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...