alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರಿನಲ್ಲಿ ಓಡಾಡ ಬಯಸುವವರಿಗೊಂದು ಭರ್ಜರಿ ಸುದ್ದಿ

ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿ ಗ್ರಾಹಕರಿಗೊಂದು ಭರ್ಜರಿ ಆಫರ್ ನೀಡುತ್ತಿದೆ. ತನ್ನ ವಾಹನಗಳನ್ನು 5 ವರ್ಷಗಳ ಲೀಸ್ ಗೆ ಕೊಡುತ್ತಿರುವುದಾಗಿ ಘೋಷಿಸಿದೆ. ಹಾಗಂತ ನೀವೇನು ಒಮ್ಮೆಲೆ 5 ವರ್ಷದ ಹಣವನ್ನು ಕಟ್ಟಬೇಕಾಗಿಲ್ಲ. ತಿಂಗಳಿಗೆ ನಿಗದಿಪಡಿಸಿದ ಹಣ ತುಂಬಿದರೆ ಸಾಕು ಅಷ್ಟು ಸಮಯ ವಾಹನ ನಿಮ್ಮದಾಗುತ್ತದೆ.

ಎಂಟ್ರಿ ಲೆವೆಲ್ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಗಳಾದ (KUV100, TUV300, Scorpio, Marazzo and the XUV500 ) ಕೆಯುವಿ100, ಟಿಯುವಿ300, ಸ್ಕಾರ್ಪಿಯೋ, ಮರಾಝೊ ಮತ್ತು ಎಕ್ಸ್ ಯು ವಿ 500 ವಾಹನಗಳನ್ನು ಲೀಸ್ ಗೆ ಪಡೆಯಬಹುದಾಗಿದೆ. 13,499 ರಿಂದ ಹಿಡಿದು 32,999 ರೂ.ವರೆಗೂ ಮಾಸಿಕ ಕಂತಿನ ದರ ನಿಗದಿ ಮಾಡಲಾಗಿದೆ. ದೆಹಲಿ, ಮುಂಬೈ, ಪುಣೆ, ಅಹಮದಾಬಾದ್, ಬೆಂಗಳೂರು ಹಾಗೂ ಹೈದರಾಬಾದ್ ನಗರಗಳಲ್ಲಿ ಪ್ರಸ್ತುತ ಈ ಸೌಲಭ್ಯ ಸಿಗಲಿದ್ದು, ಮುಂದಿನ ಹಂತದಲ್ಲಿ ಇನ್ನೂ 19 ಪ್ರಮುಖ ನಗರಗಳಲ್ಲಿ ವಿಸ್ತರಿಸುವ ಚಿಂತನೆ ಇದೆ.

ಇಲ್ಲಿ ನಿಮಗೆ ಒಂದು ಪ್ರಯೋಜನವೆಂದರೆ, ಎಂಡ್ ಟು ಎಂಡ್ ಮೆಂಟೇನೆನ್ಸ್, ವಿಮೆ, ಅಪಘಾತದಿಂದ ವಾಹನಕ್ಕೆ ಹಾನಿಯಾಗಿದ್ದರೆ ಅದರ ದುರಸ್ತಿ ಇಲ್ಲವೇ ಹೊಸ ವಾಹನ ವ್ಯವಸ್ಥೆಯೂ ಇದೆ. ಆದರೆ, 5 ವರ್ಷದ ಅವಧಿವರೆಗೆ ಮಾಸಿಕವಾಗಿ ನೀವು ಕಟ್ಟಿದ ಹಣ ವಾಪಸ್ ಕೊಡಲಾಗುತ್ತದೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...