alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ರೋಡಿಗಿಳಿಯಲಿದೆ ‘ಜಾವಾ’ ಬೈಕ್…!

jawa‘ಜಾವಾ’ ಆ ದಿನಗಳನ್ನು ನೆನಪಿಸುವ ಅದ್ಭುತ ಮೋಟರ್ ಸೈಕಲ್. ಮೈಸೂರಿನ ಐಡಿಯಲ್ ಜಾವಾ ಕಂಪನಿ ಇದನ್ನು ತಯಾರಿಸಿ ಮಾರಾಟ ಮಾಡ್ತಾ ಇತ್ತು. ಜಾವಾ 250, ಬೈಕ್ ಪ್ರಿಯರ ಅತ್ಯಂತ ನೆಚ್ಚಿನ ಮಾಡೆಲ್. 1996ರಲ್ಲಿ ಕಂಪನಿ ಬಾಗಿಲು ಮುಚ್ಚುವ ಮುನ್ನ ಯೆಜ್ಡಿ ಬೈಕ್ ಗಳನ್ನು ಪರಿಚಯಿಸಿತ್ತು. ಈಗ ಇದೇ ಬ್ರಾಂಡ್ ನ ಬೈಕ್ ಗಳನ್ನು ಮತ್ತೆ ತರಲು ಮಹಿಂದ್ರಾ & ಮಹಿಂದ್ರಾ ಕಂಪನಿ ಮುಂದಾಗಿದೆ.

ಜೆಕೊಸ್ಲೋವಾಕಿಯಾದ ಈ ಬ್ರಾಂಡನ್ನು ಮಹಿಂದ್ರಾ ಕಂಪನಿ ಇನ್ನೂ ಸ್ವಾಧೀನಕ್ಕೆ ಪಡೆದಿಲ್ಲ. ಆದ್ರೆ ಭಾರತದಲ್ಲಿ ಬೈಕ್ ತಯಾರಿಕೆಗೆ ಲೈಸನ್ಸ್ ಪಡೆದುಕೊಳ್ಳಲಿದೆ. ಜಾವಾ ಬ್ರಾಂಡ್ ನ ಮೋಟರ್ ಸೈಕಲ್ ಗಳನ್ನು ಭಾರತದಲ್ಲಿ ಅಭಿವೃದ್ಧಿಪಡಿಸೋದಾಗಿ ಮಹಿಂದ್ರಾ ಕಂಪನಿ ಹೇಳಿದೆ. ಪಿತಾಂಪುರದಲ್ಲಿರುವ ಮಹಿಂದ್ರಾ & ಮಹಿಂದ್ರಾ ಕಂಪನಿಯ ಘಟಕದಲ್ಲೇ ಉತ್ಪಾದನಾ ಕಾರ್ಯ ನಡೆಯಲಿದೆ. ಆದ್ರೆ ಆ ಮೋಟರ್ ಸೈಕಲ್ ಗಳಿಗೆ ಮಹಿಂದ್ರಾ ಬ್ರಾಂಡ್ ಕೊಡುತ್ತಿಲ್ಲ. 2018ರ ಆಟೋ ಎಕ್ಸ್ ಪೋ ನಲ್ಲಿ ಜಾವಾ, ಬೈಕ್ ಪ್ರಿಯರನ್ನು ಸೆಳೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...