alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಸ್ಕಾರ್ಪಿಯೋ ಎಸ್ 9 ವಿಶೇಷತೆ ಏನು ಗೊತ್ತಾ…?

ಮಹಿಂದ್ರಾ ಆಂಡ್ ಮಹಿಂದ್ರ ಲಿ. (ಎಂ ಆಂಡ್ ಎಂ ಲಿ.) ತನ್ನ ಜನಪ್ರಿಯ ಎಸ್‌ಯುವಿ ಆಗಿರುವ ಸ್ಕಾರ್ಪಿಯೋದಲ್ಲಿ ಹೊಸ ಫೀಚರ್‌ಗಳನ್ನು ಅಳವಡಿಸಿದ ಎಸ್9 ಎಂಬ ನೂತನ ಮಾದರಿಯನ್ನು ಬಿಡುಗಡೆಗೊಳಿಸಿದೆ. ಈ ಸ್ಕಾರ್ಪಿಯೋ ಎಸ್‌9 ಮಾದರಿಯ ಬೆಲೆ 13.99 ಲಕ್ಷ ರೂ. (ದೆಹಲಿಯಲ್ಲಿ ಎಕ್ಸ್ ಶೋರೂಂ) ಆಗಿರಲಿದೆ.

ಸ್ಕಾರ್ಪಿಯೋ ಎಸ್‌9 320 ಎನ್ಎಂ ಟಾರ್ಕ್‌ನೊಂದಿಗೆ 103 ಕೆಡಬ್ಲ್ಯೂ (140 ಬಿಎಚ್‌ಪಿ) ಎಂಹಾಕ್ ಎಂಜಿನ್‌ ಚಾಲಿತವಾಗಿದೆ. ಸಂಪೂರ್ಣ ಸ್ವಯಂಚಾಲಿತ ತಾಪ ನಿಯಂತ್ರಣ (ಎಫ್‌ಎಟಿಸಿ), 15 ಸೆಂಮೀ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಜಿಪಿಎಸ್ ನ್ಯಾವಿಗೇಶನ್ ಸಹಿತ, ಸ್ಟಾಟಿಕ್ ಬೆಂಡಿಂಗ್ ಪ್ರೊಜೆಕ್ಟರ್ ಹೆಡ್‌ ಲ್ಯಾಂಪ್, ಎಲ್‌ಇಡಿ ಲೈಟ್ ಗೈಡ್‌ಗಳು, ಒಆರ್‌ವಿಎಂಗಳೊಂದಿಗಿನ ಸೈಡ್ ಟರ್ನ್ ಇಂಡಿಕೇಟರ್‌ಗಳು, ಸ್ಟಿಯರಿಂಗ್ ಮೇಲೆ ಆಡಿಯೋ ಮತ್ತು ಕ್ರೂಸ್ ಕಂಟ್ರೋಲ್‌ಗಳಂತಹ ಹೈಎಂಡ್ ಫೀಚರ್‌ಗಳನ್ನೂ ಈ ಎಸ್‌ಯುವಿ ಒಳಗೊಂಡಿರಲಿದೆ.

ಸ್ಕಾರ್ಪಿಯೋದ ಎಸ್‌9 ಮಾದರಿಯ ಬಿಡುಗಡೆ ವೇಳೆ ಮಾತನಾಡಿದ ಮಹಿಂದ್ರಾ ಆಂಡ್ ಮಹಿಂದ್ರಾ ಲಿ.ನ ಮಾರಾಟ ಮತ್ತು ಮಾರುಕಟ್ಟೆ- ಆಟೊಮೇಟಿವ್ ವಿಭಾಗದ ಮುಖ್ಯಸ್ಥ ವೀಜಯ್ ರಾಮ್ ನಕ್ರಾ, “ಸ್ಕಾರ್ಪಿಯೋ ಭಾರತದ ವಾಹನ ಮಾರುಕಟ್ಟೆಯ ಸ್ವರೂಪವನ್ನೇ ಬದಲಾಯಿಸಿದೆ ಮತ್ತು ಎಸ್‌ಯುವಿ ವಿಭಾಗದಲ್ಲಿ ಪ್ರಬಲ ಶಕ್ತಿಯಾಗಿ ಮುಂದುವರಿದಿದೆ. ಹೊಸ ಸ್ಕಾರ್ಪಿಯೋ ಎಸ್‌9 ಅದ್ಭುತವಾದ ಫೀಚರ್‌ಗಳ ಪ್ಯಾಕೇಜ್ ಅನ್ನು ಆಕರ್ಷಕ ಬೆಲೆಯಲ್ಲಿ ನೀಡಲಿದೆ.ಡ್ರೈವಿಂಗ್‌ನ ಥ್ರಿಲ್ ಹಾಗೂ ಸಾಹಸವನ್ನು ಹಾಗೆಯೇ ಉಳಿಸಿಕೊಂಡು ಹೈ ಎಂಡ್ ಫೀಚರ್‌ನ ಅನುಭವವನ್ನು ಇದು ಒದಗಿಸಲಿದೆ” ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...