alex Certify
ಕನ್ನಡ ದುನಿಯಾ       Mobile App
       

Kannada Duniya

500 ರೂ. ತೆಗೆಯಬಯಸಿದವರಿಗೆ 2500 ರೂ. ಕೊಟ್ಟಿದೆ ಈ ಎಟಿಎಂ

ಸೋಮವಾರದಂದು ಮಹಾರಾಷ್ಟ್ರದ ಔರಂಗಾಬಾದ್ ನ ಆಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಹಣ ತೆಗೆಯಲು ಬಂದವರಿಗೆ ಅಚ್ಚರಿ ಕಾದಿತ್ತು. 500 ರೂ. ತೆಗೆಯಬಯಸಿದವರಿಗೆ ಎಟಿಎಂನಿಂದ 2500 ರೂ. ಬಂದಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಜನ ಸಾಲುಗಟ್ಟಿ ಹಣ ತೆಗೆದಿದ್ದಾರೆ.

ಎಟಿಎಂ ಗೆ ಹಣ ತುಂಬಲು ಬಂದಿದ್ದ ಸಿಬ್ಬಂದಿ ಮಾಡಿದ ಯಡವಟ್ಟು ಈ ರೀತಿ ಆಗಲು ಕಾರಣವೆಂದು ಹೇಳಲಾಗಿದ್ದು, 500 ರೂ. ತುಂಬುವ ಜಾಗದಲ್ಲಿ ಸಿಬ್ಬಂದಿ 2000 ರೂ. ನೋಟುಗಳನ್ನು ಹಾಕಿದ್ದರೆನ್ನಲಾಗಿದೆ.

ಪೊಲೀಸರು ಹಾಗೂ ಬ್ಯಾಂಕ್ ಅಧಿಕಾರಿಗಳಿಗೆ ವಿಷಯ ತಿಳಿಯುವಷ್ಟರಲ್ಲಿ ಸುಮಾರು 2.68 ಲಕ್ಷ ರೂ. ಗಳನ್ನು ಎಟಿಎಂನಿಂದ ಡ್ರಾ ಮಾಡಲಾಗಿದ್ದು, ಆ ಬಳಿಕ ಎಟಿಎಂ ಸ್ಥಗಿತಗೊಳಿಸಿ ದೋಷ ಸರಿಪಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...