alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯರ ಅಚ್ಚುಮೆಚ್ಚಿನ ಆಹಾರ ಮ್ಯಾಗಿ

ಮ್ಯಾಗಿ ಭಾರತೀಯರ ಫೆವರೆಟ್. ಇದನ್ನು ಈ ಅಂಕಿ-ಸಂಖ್ಯೆಗಳೇ ಹೇಳ್ತಿವೆ. 2015 ರಲ್ಲಿ ಮಾರುಕಟ್ಟೆಯಲ್ಲಿ ತುಂಬಾ ಹಿನ್ನಡೆ ಅನುಭವಿಸಿದ್ದ ಮ್ಯಾಗಿ ಮತ್ತೆ ಭಾರತೀಯ ಮಾರುಕಟ್ಟೆಯನ್ನು ಆವರಿಸಿದೆ. ಭಾರತೀಯರ ಅಚ್ಚುಮೆಚ್ಚಿನ ಆಹಾರ ಮ್ಯಾಗಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ನೆಸ್ಲೆ ಇಂಡಿಯಾದ ನೂಡಲ್ಸ್ ಮ್ಯಾಗಿಗೆ 2015 ರಲ್ಲಿ ಸಂಕಟ ಎದುರಾಗಿತ್ತು. ಅದ್ರಲ್ಲಿ ವಿಷಕಾರಿ ಅಂಶವಿರುವುದು ಪತ್ತೆಯಾಗಿತ್ತು. ಉತ್ಪಾದನೆ ನಿಲ್ಲಿಸಿ ಮತ್ತೆ ಮಾರುಕಟ್ಟೆಗೆ ದಾಳಿಯಿಟ್ಟ ಮ್ಯಾಗಿಗೆ ಪತಂಜಲಿ ಸೇರಿದಂತೆ ಬೇರೆ ಕಂಪನಿಗಳ ನೂಡಲ್ಸ್ ಗಳು ಸ್ಪರ್ಧೆಯೊಡ್ಡುವ ಸಾಧ್ಯತೆ ಹೆಚ್ಚಿತ್ತು. ಹಿಂದೆ ಶೇಕಡಾ 75 ರಷ್ಟು ಭಾರತೀಯ ಮಾರುಕಟ್ಟೆ ಆವರಿಸಿದ್ದ ಮ್ಯಾಗಿ ಈಗ ಮತ್ತೆ ಅದೇ ಸ್ಥಾನಕ್ಕೆ ಸಮೀಪವಾಗ್ತಿದೆ.

ಭಾರತೀಯ ಮಾರುಕಟ್ಟೆಯ ಶೇಕಡಾ 60 ರಷ್ಟು ಭಾಗವನ್ನು ಮ್ಯಾಗಿ ಆವರಿಸಿದೆ. ವ್ಯವಹಾರದ ವಿಷ್ಯದಲ್ಲಿ ನಾವು ಮೊದಲಿನ ಹಂತ ಮುಟ್ಟಿದ್ದೇವೆ. ಮಾರಾಟದ ವಿಚಾರದಲ್ಲಿ ಇನ್ನೂ ಸಾಧನೆ ಬಾಕಿಯಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ. ಮೊದಲಿನ ಹಂತ ತಲುಪಲು ಇನ್ನೂ ಸ್ವಲ್ಪ ಸಮಯ ಬೇಕೆಂದು ಅವ್ರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...