alex Certify
ಕನ್ನಡ ದುನಿಯಾ       Mobile App
       

Kannada Duniya

ಡೀಸೆಲ್ 4 ರೂ., ಪೆಟ್ರೋಲ್ 1.70 ರೂ. ಇಳಿಕೆ

ಭೋಪಾಲ್: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿದ ಬಳಿಕ, ಕೆಲ ರಾಜ್ಯಗಳಲ್ಲಿ ವ್ಯಾಟ್ ಕಡಿತ ಮಾಡಲಾಗಿದೆ.

ಬಿ.ಜೆ.ಪಿ. ಆಡಳಿತದಲ್ಲಿರುವ ಗುಜರಾತ್, ಮಹಾರಾಷ್ಟ್ರದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿತ ಮಾಡಲಾಗಿದೆ. ಇದೇ ರೀತಿ ಮಧ್ಯಪ್ರದೇಶದಲ್ಲಿಯೂ ಪೆಟ್ರೋಲ್ ಮೇಲೆ ಶೇ. 3 ರಷ್ಟು, ಡೀಸೆಲ್ ಮೇಲೆ ಶೇ. 5 ರಷ್ಟು ವ್ಯಾಟ್ ಕಡಿತ ಮಾಡಲಾಗಿದೆ.

ಪೆಟ್ರೋಲ್ ಮೇಲಿನ ವ್ಯಾಟ್ ಶೇ. 31 ರಿಂದ ಶೇ. 28 ಕ್ಕೆ ಇಳಿಕೆಯಾಗಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 1.70 ರೂ. ಕಡಿಮೆಯಾಗಿದೆ. ಡೀಸೆಲ್ ಮೇಲಿನ ವ್ಯಾಟ್ ಶೇ. 27 ರಿಂದ ಶೇ. 22 ರಷ್ಟು ಕಡಿಮೆಯಾಗಿ ಲೀಟರ್ ಗೆ 4 ರೂ. ಕಡಿಮೆಯಾಗಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್, ಇಂಧನ ಮೇಲಿನ ವ್ಯಾಟ್ ಕಡಿಮೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಶುಕ್ರವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರಗಳು ಜಾರಿಗೆ ಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...