alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ರೈಲ್ವೇ ಇಲಾಖೆ

ನವದೆಹಲಿ: ಈಗಾಗಲೇ ಪ್ರಯಾಣಿಕರಿಗೆ ಹಲವು ಸೇವೆ, ಸುಧಾರಣೆ ಕ್ರಮಗಳ ಮೂಲಕ ಹೆಚ್ಚು ಜನಾನುರಾಗಿಯಾಗುವತ್ತ ಹೆಜ್ಜೆ ಇಟ್ಟಿರುವ ಭಾರತೀಯ ರೈಲ್ವೇ ಇಲಾಖೆ ಸಿಹಿ ಸುದ್ದಿಯನ್ನು ನೀಡಿದೆ.

ಪ್ರಯಾಣಿಕರು ನೀಡುವ ದೂರುಗಳಿಗೆ ಪರಿಣಾಮಕಾರಿ ಕ್ರಮಗಳ ಮೂಲಕ ಸ್ಪಂದಿಸುವ ಉದ್ದೇಶದಿಂದ MADAD(Mobile Application for Desired Assistance During travel) ಮೊಬೈಲ್ ಆಪ್ ಅನ್ನು ರೈಲ್ವೇ ಇಲಾಖೆ ರಚಿಸಿದೆ.

ಪ್ರಯಾಣಿಕರು ಈ ಆಪ್ ಬಳಸಿಕೊಂಡು ರೈಲಿನಲ್ಲಿ ಕಳಪೆ ಆಹಾರ, ಸ್ವಚ್ಛತೆ ಇಲ್ಲದ ಶೌಚಾಲಯ, ರೈಲಿನ ಅವ್ಯವಸ್ಥೆ ಹಾಗೂ ಕುಂದುಕೊರತೆಗಳ ಕುರಿತಾಗಿ ದೂರು ನೀಡಬಹುದಾಗಿದೆ. ಈಗಾಗಲೇ ಸಹಾಯವಾಣಿ, ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟರ್ ಮೊದಲಾದವು ರೈಲ್ವೇ ಇಲಾಖೆಯ ದೂರು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಪ್ರಯಾಣಿಕರ ದೂರುಗಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಸ್ಪಂದಿಸುವ ಉದ್ದೇಶದಿಂದ ‘ಮದದ್’ ಆಪ್ ಬಿಡುಗಡೆ ಮಾಡಲು ರೈಲ್ವೇ ಇಲಾಖೆ ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...