alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ವಾಲೆಟ್ ಬಳಸುವ ಗ್ರಾಹಕರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ಇನ್ನು ಮುಂದೆ ಮೊಬೈಲ್ ವಾಲೆಟ್ ಮೂಲಕ ವಹಿವಾಟು ನಡೆಸುವ ಸಂದರ್ಭದಲ್ಲಿ ಗ್ರಾಹಕರು ಹಣ ಕಳೆದುಕೊಂಡರೆ, ಆತಂಕ ಪಡುವ ಅಗತ್ಯವಿಲ್ಲ.

ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಗಳಿಗೆ ನೀಡಲಾಗುತ್ತಿರುವ ಸುರಕ್ಷತೆಯನ್ನು ಮೊಬೈಲ್ ವಾಲೆಟ್ ಬಳಸುವ ಗ್ರಾಹಕರಿಗೆ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ವತಿಯಿಂದ ಹೊಸ ನಿಯಮಾವಳಿಗಳನ್ನು ರೂಪಿಸಲಾಗಿದೆ.

ವಾಲೆಟ್ ಮೂಲಕ ವಹಿವಾಟು ನಡೆಸಿದ ಗ್ರಾಹಕರಿಗೆ ತಕ್ಷಣವೇ ಮೆಸೇಜ್ ಬರುತ್ತದೆ. ಈ ಮೆಸೇಜ್ ನಲ್ಲಿ ವಾಲೆಟ್ ಸಂಸ್ಥೆಯ ಸಂಪರ್ಕ ಸಂಖ್ಯೆ ಅಥವಾ ಇಮೇಲ್ ಮಾಹಿತಿಯನ್ನು ನೀಡುವುದು ಕಡ್ಡಾಯಗೊಳಿಸಲಾಗಿದೆ. ಗ್ರಾಹಕರು ವಂಚನೆಗೊಳಗಾದ ಸಂದರ್ಭದಲ್ಲಿ ಸಂಸ್ಥೆಯನ್ನು ಸಂಪರ್ಕಿಸಲು ಇದರಿಂದ ಅನುಕೂಲವಾಗುತ್ತದೆ.

ಗ್ರಾಹಕರಿಗೆ ಅನುಕೂಲವಾಗುವಂತೆ ಎಲ್ಲ ವಾಲೆಟ್ ಸಂಸ್ಥೆಗಳು 24 ಗಂಟೆ ಕಾರ್ಯನಿರ್ವಹಿಸುವ ಗ್ರಾಹಕ ಸೇವಾ ಸಹಾಯವಾಣಿಯನ್ನು ಆರಂಭಿಸಬೇಕು. ದೂರು ದಾಖಲಾದ 3 ದಿನಗಳೊಳಗೆ ಸಂಸ್ಥೆಯು ಹಣವನ್ನು ಮರು ಪಾವತಿಸಬೇಕು ಎಂಬುದು ಸೇರಿದಂತೆ ವಿವಿಧ ನಿಯಮಾವಳಿಗಳನ್ನು ರೂಪಿಸಿದ್ದು, ಇದರಿಂದ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...