alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯೋಗಿಗಳ ಬಳಿ ಅಳಲು ತೋಡಿಕೊಂಡ ವಂಚಕ ಉದ್ಯಮಿ

ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ 11,500 ಕೋಟಿ ರೂಪಾಯಿ ಪಂಗನಾಮ ಹಾಕಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರದ ಉದ್ಯಮಿ ನೀರವ್ ಮೋದಿ, ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಇ ಮೇಲ್ ಕಳುಹಿಸಿದ್ದಾರೆ. ಸದ್ಯಕ್ಕೆ ವೇತನ ನೀಡಲು ಸಾದ್ಯವಿಲ್ಲ, ಹಾಗಾಗಿ ಬೇರೆ ಕೆಲಸ ನೋಡಿಕೊಳ್ಳಿ ಅಂತಾ ಇಮೇಲ್ ನಲ್ಲಿ ಉಲ್ಲೇಖಿಸಿದ್ದಾರೆ.

ತನಿಖಾ ಸಂಸ್ಥೆ ಈಗಾಗ್ಲೇ ನೀರವ್ ಮೋದಿಗೆ ಸೇರಿದ ಕಂಪನಿಗಳ ಸ್ಟಾಕ್ ಗಳನ್ನೆಲ್ಲ ಜಫ್ತಿ ಮಾಡಿದೆ. ಆದಾಯ ತೆರಿಗೆ ಇಲಾಖೆ ಬ್ಯಾಂಕ್ ಖಾತೆಗಳನ್ನು ಜಫ್ತಿ ಮಾಡಿದೆ. ಹಾಗಾಗಿ ಉದ್ಯೋಗಿಗಳಿಗೆ ವೇತನ ನೀಡಲು ಸಾಧ್ಯವಾಗ್ತಿಲ್ಲ, ಭವಿಷ್ಯ ಅನಿಶ್ಚಿತತೆಯಿಂದ ಕೂಡಿದೆ ಅಂತಾ ಇಮೇಲ್ ಕಳಿಸಿದ್ದಾರೆ ನೀರವ್ ಮೋದಿ.

ನೀರವ್ ಮೋದಿಯ ಪಾಸ್ಪೋರ್ಟ್ ಅನ್ನು ರದ್ದು ಮಾಡಲಾಗಿದೆ. ಹಾಗಾಗಿ ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ವಿದೇಶಾಂಗ ಸಚಿವಾಲಯಕ್ಕೂ ಪತ್ರ ಬರೆಯಲು ನೀರವ್ ಮೋದಿ ಮುಂದಾಗಿದ್ದಾರಂತೆ. ಈಗಾಗ್ಲೇ ಉದ್ಯಮಿಗೆ ಸೇರಿದ 5,700 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...