alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್

ಕೆಲ ದಿನಗಳ‌ ಹಿಂದೆ ಮಹಾರಾಷ್ಟ್ರ ಸರಕಾರ ಪೆಟ್ರೋಲ್, ಡಿಸೇಲ್ ದರ ಇಳಿಸುವ ಮೂಲಕ ಅನೇಕರಿಗೆ ಖುಷಿ ನೀಡಿತ್ತು. ಆದರೀಗ ಇದನ್ನು ಸರಿದೂಗಿಸುವುದರೊಂದಿಗೆ ಹೆಚ್ಚುವರಿ ಆದಾಯ ಸಂಗ್ರಹಿಸುವ ನಿಟ್ಟಿನಲ್ಲಿ ಮದ್ಯದ ದರವನ್ನು ಏರಿಸುವುದಕ್ಕೆ ಸಜ್ಜಾಗಿದೆ.

ಸರಕಾರದ ಈ ನಿರ್ಧಾರದಿಂದ ಭಾರತದಲ್ಲಿ ಉತ್ಪನ್ನವಾಗುವ ವಿದೇಶಿ ಮದ್ಯದ ಬೆಲೆ ಪ್ರತಿ‌‌ ಲೀಟರ್ ಗೆ 20-30 ರೂ. ಏರಿಕೆಯಾಗುವ ಸಾಧ್ಯತೆ ಇದೆ ಎನ್ನುವ ಮೂಲಕ‌ ಕುಡುಕರಿಗೆ ಶಾಕ್ ನೀಡಿದೆ. ಆದರೆ ಆರ್ಥಿಕ‌ ಇಲಾಖೆ, ಅಬಕಾರಿ ತೆರಿಗೆ ವಸೂಲಿಗೆ ನೀಡಿರುವ ಟಾರ್ಗೆಟ್ ತಲುಪಲು ಇದು ಅನಿವಾರ್ಯ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಹಾರಾಷ್ಟ್ರ ಆರ್ಥಿಕ ಇಲಾಖೆ 2018-19 ನೇ ಸಾಲಿನಲ್ಲಿ ಸುಮಾರು 15,343 ಕೋಟಿ ರೂ. ಸಂಗ್ರಹಿಸಬೇಕೆಂದು ಗುರಿ‌ ನೀಡಿದೆ. ಆದ್ದರಿಂದ ಐದು ವರ್ಷದ ಬಳಿಕ ಅಬಕಾರಿ ತೆರಿಗೆಯನ್ನು ಏರಿಸಲು‌ ನಿರ್ಧರಿಸಲಾಗಿದ್ದು, ಇನ್ನೆರಡು ‌ದಿನದಲ್ಲಿ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ.

ಅಧಿಕಾರಿಯೊಬ್ಬರ ಪ್ರಕಾರ, ಬಹುತೇಕ ರಾಜ್ಯಗಳಲ್ಲಿ ಪ್ರತಿ ವರ್ಷ ಅಬಕಾರಿ ತೆರಿಗೆ ಏರಿಸುತ್ತಾರೆ. ಆದರೆ ಮಹಾರಾಷ್ಟ್ರದಲ್ಲಿ‌ 2013 ರಿಂದ ಈಚೆಗೆ ತೆರಿಗೆ ಏರಿಕೆ ಮಾಡಿಲ್ಲ. ಆದ್ದರಿಂದ ಈಗ ಏರಿಸಲು‌ ನಿರ್ಧರಿಸಲಾಗಿದೆ. ತೆರಿಗೆ ಏರಿಕೆಯಿಂದ ಸುಮಾರು 700 ಕೋಟಿ‌ ರೂ. ಹೆಚ್ಚುವರಿ ಆದಾಯ ಸರಕಾರಕ್ಕೆ‌ ಬರಲಿದೆ. ಆದರೆ ಆರ್ಥಿಕ‌ ಇಲಾಖೆ ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ಎರಡು‌ ಸಾವಿರ ಕೋಟಿ ಹೆಚ್ಚುವರಿ ಆದಾಯ ಸಂಗ್ರಹಕ್ಕೆ ಗುರಿ ನೀಡಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...