alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಜೊತೆ ಮೊಬೈಲ್ ಲಿಂಕ್ ಗೆ ನೀಡಲಾಗ್ತಿದೆ ಈ ಸೇವೆ

ಆಧಾರ್ ಜೊತೆ ಮೊಬೈಲ್ ಲಿಂಕ್ ಅನಿವಾರ್ಯವಾಗಿದೆ. ನಂಬರ್ ಲಿಂಕ್ ಮಾಡಲು ನಿಮಗೆ ಮಾರ್ಚ್ 31ರವರೆಗೆ ಸಮಯವಿದೆ. ಏತನ್ಮಧ್ಯೆ ಏರ್ಟೆಲ್ ತನ್ನ ಗ್ರಾಹಕರಿಗಾಗಿ ವಿಶೇಷ ಮೂರು ಸೇವೆಗಳನ್ನು ತಂದಿದೆ.

ಏರ್ಟೆಲ್ ಯುಐಡಿಎಐ ನೀಡಿರುವ ಟೋಲ್ ಫ್ರೀ ನಂಬರ್ ಜೊತೆ ಏರ್ಟೆಲ್ ಮತ್ತೆ ಮೂರು ಸೇವೆಗಳನ್ನು ಗ್ರಾಹಕರಿಗೆ ನೀಡ್ತಿದೆ. ಏರ್ಟೆಲ್ ನ ಈ ಸೇವೆ, ವೃದ್ಧರು, ವಿಕಲಾಂಗರು ಹಾಗೂ ಎನ್ನಾರೈಗಳಿಗೆ ಲಭ್ಯವಾಗಲಿದೆ. ಏರ್ಟೆಲ್ ಅಧಿಕೃತ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ, 70 ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯ ನಾಗರಿಕರು ಮನೆಯಲ್ಲಿಯೇ ಕುಳಿತು ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡಬಹುದಾಗಿದೆ.

ವಿಕಲಾಂಗರು ಕೂಡ ಏರ್ಟೆಲ್ ಅಧಿಕೃತ ವೆಬ್ಸೈಟ್ ಗೆ ಹೋಗಿ ಅಲ್ಲಿ ಕೇಳಿರುವ ಮಾಹಿತಿಯನ್ನು ಒದಗಿಸಿ ಮೊಬೈಲ್ ಜೊತೆ ಆಧಾರ್ ಲಿಂಕ್ ಮಾಡಬಹುದಾಗಿದೆ. ಎನ್ನಾರೈ ಕೂಡ ಮನೆಯಲ್ಲಿಯೇ ಕುಳಿತು ಆಧಾರ್ ಜೊತೆ ಮೊಬೈಲ್ ಲಿಂಕ್ ಮಾಡಬಹುದಾಗಿದೆ.

ಈ ವಿಶಿಷ್ಟ ಸೇವೆ ಪಡೆಯಲು ಗ್ರಾಹಕರು ಮೊದಲು ಏರ್ಟೆಲ್ ಅಧಿಕೃತ ವೆಬ್ಸೈಟ್ ಗೆ ಹೋಗಬೇಕಾಗುತ್ತದೆ. ಅಲ್ಲಿ ಕೇಳಿರುವ ದಾಖಲೆಗಳ ಮಾಹಿತಿ ನೀಡಿ ಆಧಾರ್ ಜೊತೆ ಮೊಬೈಲ್ ಲಿಂಕ್ ಮಾಡಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...