alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯೋಗಿಗಳ ‘ಲೈಫ್ ಸ್ಟೈಲ್’ ನಿಂದ ಐಟಿ ಉದ್ಯಮಕ್ಕಾಗುವ ‘ನಷ್ಟ’ವೆಷ್ಟು ಗೊತ್ತಾ…?

ದೇಶದ ಐಟಿ‌ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ‌ಸಿಬ್ಬಂದಿಗಳ ಜೀವನ ಶೈಲಿಯಿಂದ ಪ್ರತಿವರ್ಷ ಬರೋಬ್ಬರಿ 24 ಸಾವಿರ ಕೋಟಿ ರೂಪಾಯಿ ನಷ್ಠವಾಗುತ್ತಿದೆ ಎಂದು ವರದಿಯೊಂದು ಹೇಳಿದೆ.

ರೆಡ್‌ಶೀರ್ ಸಂಶೋಧನಾ ಹಾಗೂ ಸಲಹಾ‌ ಸಂಸ್ಥೆ ನೀಡಿರುವ ವರದಿಯಲ್ಲಿ ಈ‌ ಆಘಾತಕಾರಿ ಅಂಶ ಬಹಿರಂಗಗೊಂಡಿದೆ. ಐಟಿ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಜೀವನ‌ ಶೈಲಿ, ಅಭ್ಯಾಸಗಳಿಂದ 24‌ ಸಾವಿರ ಕೋಟಿ‌ ನಷ್ಟವಾಗುತ್ತಿದ್ದು, ಇದು ಆದಾಯದ ಶೇ.7 ರಷ್ಟಾಗಿದೆ ಎಂದು ಅಂದಾಜಿಸಿದೆ.

ಈ ರೀತಿ ‌ನಷ್ಟ ಉಂಟಾಗಲು ಪ್ರಮುಖವಾಗಿ‌ ಐದು ಅಂಶಗಳನ್ನು‌ ಗುರುತಿಸಲಾಗಿದೆ. ದೈಹಿಕ ನಿಷ್ಕ್ರಿಯತೆ, ದೈಹಿಕ ಹಾಗೂ‌ ಮಾನಸಿಕ ಆರೋಗ್ಯ, ಕೆಟ್ಟ ಆಹಾರ ಪದ್ಧತಿ ಹಾಗೂ ಮಾದಕ ವಸ್ತುಗಳು‌ ಎಂದು ಹೇಳಲಾಗಿದೆ.

ಇದರಲ್ಲಿ ಪ್ರಮುಖವಾಗಿ ಶೇ.50ರಷ್ಟು‌ ನಷ್ಟ ದೈಹಿಕ ನಿಷ್ಕ್ರಿಯತೆ, ದೈಹಿಕ ಹಾಗೂ‌ ಮಾನಸಿಕ ಆರೋಗ್ಯದಿಂದಲೇ ಆಗುತ್ತಿದೆ. ಇನ್ನು 30-40 ವರ್ಷದೊಳಗಿನ ಸಿಬ್ಬಂದಿಗಳು ಶೇ.42 ಪಾಲನ್ನು ಹೊಂದಿದ್ದು, 20-30 ವಯೋಮಾನದವರು ಶೇ. 30ರಷ್ಟು‌ ನಷ್ಟ ಉಂಟು ಮಾಡುತ್ತಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...