alex Certify
ಕನ್ನಡ ದುನಿಯಾ       Mobile App
       

Kannada Duniya

ದುಬಾರಿಯಾಯ್ತು ಡ್ರೈವಿಂಗ್ ಲೈಸೆನ್ಸ್ ಶುಲ್ಕ

images

ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿದೆ. ಇನ್ಮುಂದೆ ಚಾಲನಾ ಪರವಾನಿಗೆ ಶುಲ್ಕ, ಚಾಲನಾ ಪರೀಕ್ಷಾ ಶುಲ್ಕ ಹಾಗೂ ಫಿಟ್ನೆಸ್ ಶುಲ್ಕ ಏರಿಕೆಯಾಗಲಿದೆ. ಚಾಲನಾ ಪರೀಕ್ಷಾ ಶುಲ್ಕ 250 ರಿಂದ 500 ರೂಪಾಯಿಯಾಗಲಿದೆ. ಪರೀಕ್ಷೆಯಲ್ಲಿ ವಿಫಲವಾದಲ್ಲಿ ಇನ್ನೊಮ್ಮೆ 300 ರೂಪಾಯಿ ಶುಲ್ಕ ನೀಡಬೇಕಾಗುತ್ತದೆ.

ಸರ್ಕಾರಿ ಮೂಲಗಳ ಪ್ರಕಾರ 1980 ರ ನಂತ್ರ ಇದೇ ಮೊದಲ ಬಾರಿ ಚಾಲನಾ ಪರವಾನಿಗೆ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಹಾಗೆ ಲರ್ನಿಂಗ್ ಲೈಸೆನ್ಸ್ ಗೆ 150 ರೂಪಾಯಿ ನೀಡಬೇಕು. ಈ ಹಿಂದೆ 50 ರೂಪಾಯಿ ನೀಡಿ ಲರ್ನಿಂಗ್ ಲೈಸೆನ್ಸ್ ಪಡೆಯಬಹುದಾಗಿತ್ತು.

ಅಂತರಾಷ್ಟ್ರೀಯ ಚಾಲನಾ ಪರವಾನಿಗೆ ಮಾಡಿಸಲು ಸಾವಿರ ರೂಪಾಯಿ ನೀಡಬೇಕಾಗುತ್ತದೆ. ಡ್ರೈವಿಂಗ್ ಲೈಸೆನ್ಸ್ ನವೀಕರಣ ಶುಲ್ಕ 200 ರೂಪಾಯಿಯಾಗಿದ್ದು, ಹೊಸ ನಿಯಮ ತಕ್ಷಣದಿಂದಲೇ ಜಾರಿಯಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಡೋನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಜನಾಂಗೀಯ ದ್ವೇಷ ಹೆಚ್ಚಾಗುತ್ತಿದೆಯೇ..?

    View Results

    Loading ... Loading ...