alex Certify
ಕನ್ನಡ ದುನಿಯಾ       Mobile App
       

Kannada Duniya

ಐದು ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಸಿಗ್ತಿದೆ ಈ ಸ್ಮಾರ್ಟ್ಫೋನ್

ಲಾವಾ ಗುರುವಾರ ಝೆಡ್ ಶ್ರೇಣಿಯ ಹೊಸ ಸ್ಮಾರ್ಟ್ಫೋನ್ ಲಾವಾ ಝೆಡ್ 60 ಎಸ್ ಬಿಡುಗಡೆ ಮಾಡಿದೆ. ಲಾವಾದ ಝೆಡ್ ಸರಣಿಯ 6ನೇ ಸ್ಮಾರ್ಟ್ಫೋನ್ ಇದಾಗಿದೆ. ಕಂಪನಿ ಹಿಂದಿನ ವರ್ಷ ಅಕ್ಟೋಬರ್ ನಲ್ಲಿ Lava Z60, Lava Z70, Lava Z80, and Lava Z90 ಸ್ಮಾರ್ಟ್ಫೋನ್ ಬಿಡುಗಡೆ ಮಾಡಿತ್ತು.

ಲಾವಾದ ಹೊಸ ಸ್ಮಾರ್ಟ್ಫೋನ್ ಲಾವಾ ಝೆಡ್ 60 ಎಸ್ ಬೆಲೆ 4,949 ರೂಪಾಯಿ. ಲಾವಾ ಝೆಡ್ 60 ಎಸ್ ಮೊಬೈಲ್ ಗೆ ಶಾರ್ಫ್ ಕ್ಲಿಕ್ ಕ್ಯಾಮರಾ ನೀಡಲಾಗಿದೆ. 2500 mAh ಬ್ಯಾಟರಿ ಇದೆ. 1 ಜಿಬಿ ರ್ಯಾಮ್ ಹೊಂದಿದೆ. 2ಜಿಬಿ ರ್ಯಾಮ್ ರೂಪಾಂತರವನ್ನು 6 ತಿಂಗಳ ನಂತ್ರ ಬಿಡುಗಡೆ ಮಾಡಲಿದೆ.

ಐದು ಮೆಗಾಪಿಕ್ಸಲ್ ನ ರಿಯರ್ ಕ್ಯಾಮರಾ ಹಾಗೂ 5 ಮೆಗಾಪಿಕ್ಸಲ್ ನ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. 1 ಜಿಬಿ ರ್ಯಾಮ್ ಫೋನ್ ಗೆ 16 ಜಿಬಿ ಸ್ಟೋರೇಜ್ ಸಿಗ್ತಿದೆ. ಇದನ್ನು 64 ಜಿಬಿಯವರೆಗೆ ಹೆಚ್ಚಿಸಬಹುದಾಗಿದೆ. ಮೊಬೈಲ್ ಅಂಗಡಿಗಳಲ್ಲಿ ಹೊಸ ಫೋನ್ ಸಿಗಲಿದೆ. ಕಂಪನಿ 2,200 ರೂಪಾಯಿ ಕ್ಯಾಶ್ಬ್ಯಾಕ್ ಆಫರನ್ನೂ ನೀಡ್ತಿದೆ. ಈ ಆಫರ್ ನವೆಂಬರ್ 15,2018 ರವರೆಗೆ ಲಭ್ಯವಿರಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...