alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಐದು ತಿಂಗಳ ಬಳಿಕ ಇಷ್ಟು ಕಡಿಮೆಯಾಗಿದೆ ಚಿನ್ನದ ಬೆಲೆ

ಬುಧವಾರ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕುಸಿದ ಬೆಲೆ ಹಾಗೂ ದೇಶಿಯ ಆಭರಣಕಾರರ ಬೇಡಿಕೆಯಲ್ಲಿ ಇಳಿಕೆ ಚಿನ್ನದ ಬೆಲೆ ಕಡಿಮೆಯಾಗಲು ಕಾರಣವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 250 ರೂಪಾಯಿ ಇಳಿಕೆ ಕಂಡಿದೆ. ಇದು ಕಳೆದ 5 ತಿಂಗಳಲ್ಲಿ ಅತಿ ಹೆಚ್ಚು ಇಳಿಕೆಯಾಗಿದೆ.

ಚಿನ್ನದ ಜೊತೆ ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿಯ ಬೆಲೆ 620 ರೂಪಾಯಿ ಇಳಿಕೆಯಾಗಿದೆ. ದೆಹಲಿಯಲ್ಲಿ 99.9 ಹಾಗೂ 99.5 ಪ್ರತಿಶತದಷ್ಟು ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 250 ರೂಪಾಯಿ ಇಳಿಕೆಯಾಗಿ 30,800 ಮತ್ತು 30,650  ರೂಪಾಯಿಯಾಗಿದೆ.

ಫೆಬ್ರವರಿ 8ರ ನಂತ್ರ ಇದೇ ಮೊದಲ ಬಾರಿ ಬಂಗಾರ ಹಾಗೂ ಬೆಳ್ಳಿ ಬೆಲೆ ಇಷ್ಟು ದೊಡ್ಡ ಮಟ್ಟಿಗೆ ಇಳಿಕೆಯಾಗಿದೆ. ಅಮೆರಿಕಾದಲ್ಲಿ ಬಡ್ಡಿ ದರ ಹೆಚ್ಚಳದ ಭಯದಲ್ಲಿ ಡಾಲರ್ ಬಲ ಪಡೆಯುತ್ತಿದೆ. ಇನ್ನೊಂದು ಕಡೆ ಸ್ಥಳೀಯ ಆಭರಣಕಾರರು ಬಂಗಾರ ಖರೀದಿಗೆ ಮನಸ್ಸು ಮಾಡ್ತಿಲ್ಲ. ಇದ್ರಿಂದ ಬಂಗಾರದ ಬೇಡಿಕೆ ಇಳಿಕೆಯಾಗಿದ್ದು ಬೆಲೆಯಲ್ಲೂ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ 620 ರೂಪಾಯಿ ಇಳಿಕೆಯಾಗಿದ್ದು ಪ್ರತಿ ಕಿಲೋಗ್ರಾಮ್ ಬೆಲೆ 39,200 ರೂಪಾಯಿಗೆ ಬಂದು ನಿಂತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...