alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಗ್ಯಾಸ್ ಲೀಕ್ ಆದ್ರೆ ರೆಗ್ಯುಲೇಟರ್ ಬಂದ್ ಮಾಡುತ್ತೆ ಈ ಆಪ್

ಚಂಡೀಗಢದ ಇಬ್ಬರು ವಿದ್ಯಾರ್ಥಿಗಳು ವಿಭಿನ್ನ ಸಾಧನವೊಂದನ್ನು ಕಂಡು ಹಿಡಿದಿದ್ದಾರೆ. ಗ್ಯಾಸ್ ಲೀಕ್ ಆದ್ರೆ ರೆಗ್ಯುಲೇಟರನ್ನು ಈ ಸಾಧನ ಆಫ್ ಮಾಡುತ್ತದೆ. ನಿಮ್ಮ ಮೊಬೈಲ್ ಗೆ ಅಡುಗೆ ಮನೆಯಲ್ಲಿರುವ ಸಿಲಿಂಡರ್ ಲೀಕ್ ಆಗ್ತಿದೆ ಎಂಬ ಮಾಹಿತಿಯನ್ನು ನೀಡಲಿದೆ.

ಗ್ಯಾಸ್ ಲೀಕ್ ಬಗ್ಗೆ ಮಾಹಿತಿಯೊಂದೇ ಅಲ್ಲ ಮೊಬೈಲ್ ಮೂಲಕವೇ ನೀವು ರೆಗ್ಯುಲೇಟರನ್ನು ಆನ್-ಆಫ್ ಮಾಡಬಹುದು. ಈ ಸಾಧನ ಐಒಟಿ ಆಧಾರಿತವಾಗಿದೆ. ಜನಸಾಮಾನ್ಯರ ಜೀವನದಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ. ವಿಶೇಷವೆಂದ್ರೆ ಮನೆಯಲ್ಲಿ ಅಡುಗೆ ಅನಿಲ ಖಾಲಿಯಾದ್ರೆ ಈ ಸಾಧನವೇ ಮತ್ತೊಂದು ಅಡುಗೆ ಅನಿಲವನ್ನು ಬುಕ್ ಮಾಡಲಿದೆ.

ಚಂಡೀಗಢದ ಮಣಿಮಾಜ್ರಾ ನಿವಾಸಿ 22 ವರ್ಷದ ಅನಿಶ್ ಯಾದವ್ ಹಾಗೂ ದಕೋಲಿ ನಿವಾಸಿ 21 ವರ್ಷದ ಐಶ್ವರ್ಯ ಕೌಶಿಕ್ 6 ತಿಂಗಳಲ್ಲಿ ಈ ಸಾಧನ ಕಂಡು ಹಿಡಿದಿದ್ದಾರೆ. ಹಿಂದಿನ ವರ್ಷ ಪಂಚಕುಲಾ ಸೆಕ್ಟರ್ 10 ರಲ್ಲಿ ಗ್ಯಾಸ್ ಸ್ಫೋಟಗೊಂಡು ಅನೇಕರು ಸಾವನ್ನಪ್ಪಿದ್ದರು. ಈ ಘಟನೆ ನಂತ್ರ ಜನಸಾಮಾನ್ಯರಿಗೆ ನೆರವಾಗಲು ನಿರ್ಧರಿಸಿದ ವಿದ್ಯಾರ್ಥಿಗಳು ಈ ಸಾಧನ ಕಂಡು ಹಿಡಿದಿದ್ದಾರೆ.

ಇದೊಂದು ಎಲೆಕ್ಟ್ರಾನಿಕ್ ಕಿಟ್ ಆಗಿದ್ದು, ಇಂಟರ್ನೆಟ್ ಗೆ ಸಂಪರ್ಕ ಹೊಂದಲಿದ್ದು, ಮೊಬೈಲ್ ಆ್ಯಪ್ ಮೂಲಕ ನಿಮಗೆ ಸಿಲಿಂಡರ್ ಬಗ್ಗೆ ಮಾಹಿತಿ ನೀಡಲಿದೆ. ಇದ್ರ ಬೆಲೆ 5 ಸಾವಿರ ರೂಪಾಯಿಯಾಗಿದ್ದು, ಒಮ್ಮೆ ಇಷ್ಟು ಹಣ ಖರ್ಚು ಮಾಡಿದ್ರೆ ಸಾಕು ಎನ್ನುತ್ತಾರೆ ವಿದ್ಯಾರ್ಥಿಗಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...