alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಆಧಾರ್ ಕಾರ್ಡ್ ಕುರಿತ ಒಂದು ಮುಖ್ಯ ಮಾಹಿತಿ

ಆಧಾರ್ ಕಾರ್ಡ್ ಈಗ ಪ್ರಮುಖ ಗುರುತು ಪತ್ರವಾಗಿ ಮಾರ್ಪಟ್ಟಿದೆ. ಯುಐಡಿಎಐ ಹೊಸ ಸಂದೇಶವೊಂದನ್ನು ಜಾರಿಗೊಳಿಸಿದೆ. ಇದ್ರ ಪ್ರಕಾರ ಆಧಾರ್ ಸ್ಮಾರ್ಟ್ ಕಾರ್ಡ್ ಅಥವಾ ಆಧಾರ್ ಪ್ಲಾಸ್ಟಿಕ್ ಕಾರ್ಡ್ ಬಳಸುವಂತಿಲ್ಲ. ಲ್ಯಾಮಿನೇಷನ್ ಮಾಡಿರುವ ಆಧಾರ್ ಕಾರ್ಡ್ ಕೂಡ ಬಳಕೆಗೆ ಯೋಗ್ಯವಲ್ಲ. ಹಾಗಾಗಿ ಆಧಾರ್ ಕಾರ್ಡನ್ನು ಅಪ್ಪಿತಪ್ಪಿಯೂ ಲ್ಯಾಮಿನೇಷನ್ ಮಾಡಬೇಡಿ.

ಒಂದು ವೇಳೆ ಆಧಾರ್ ಕಾರ್ಡ್ ಲ್ಯಾಮಿನೇಷನ್ ಆಗಿದ್ದಲ್ಲಿ ಕ್ಯೂಆರ್ ಕೂಡ ಕೆಲಸ ನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಜೊತೆಗೆ ನಿಮ್ಮ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಲಿವೆ. ನಿಮ್ಮ ಒಪ್ಪಿಗೆ ಇರಲಿ ಬಿಡಲಿ ಯಾರೂ ಬೇಕಾದ್ರೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪಡೆಯಬಹುದಾಗಿದೆ.

ಸಾಮಾನ್ಯ ಕಾಗದದ ಮೇಲೆ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿ ನೀವು ಬಳಸಬಹುದು. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಕಳೆದಿದ್ದರೆ eaadhaar.uidai.gov.in ಗೆ ಹೋಗಿ ನಿಮ್ಮ ಆಧಾರ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಿ. ಹಾಗೆ ಮಾರ್ಚ್ 31ರೊಳಗೆ ಬ್ಯಾಂಕ್ ಅಕೌಂಟ್, ಮೊಬೈಲ್ ಸಿಮ್, ಪ್ಯಾನ್ ಕಾರ್ಡ್ ಹಾಗೂ ಮ್ಯೂಚುವಲ್ ಫಂಡ್ ಜೊತೆ ಆಧಾರ್ ಕಾರ್ಡ್ ಅವಶ್ಯವಾಗಿ ಲಿಂಕ್ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...