alex Certify
ಕನ್ನಡ ದುನಿಯಾ       Mobile App
       

Kannada Duniya

ಕೆವೈಸಿ ಮಾಹಿತಿ ಸಲ್ಲಿಸದವರಿಗೆ ಶಾಕ್ ಕೊಟ್ಟ ಸರ್ಕಾರ

ಇಂದಿನ ದಿನಗಳಲ್ಲಿ ಕೆವೈಸಿ(ನೌ ಯುವರ್ ಕಸ್ಟಮರ್) ಮಾಹಿತಿಗಳನ್ನು ಅಪ್ ಡೇಟ್ ಮಾಡುವುದು ಎಷ್ಟು ಮಹತ್ವದ ಸಂಗತಿ ಎಂಬುದು ತಿಳಿದೇ ಇರುವ ವಿಚಾರ.

ಹೀಗೆ ಕೆವೈಸಿ ಸಲ್ಲಿಸದ ದೇಶದ ವಿವಿಧ ಕಂಪನಿಗಳ ಸುಮಾರು 21 ಲಕ್ಷ ನಿರ್ದೇಶಕರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಅವರ ಐಡೆಂಟಿಫಿಕೇಶನ್ ನಂಬರ್(ಡಿಐಏಎನ್) ಅಥವಾ ಗುರುತಿನ ಸಂಖ್ಯೆಯನ್ನು ಡಿ ಆಕ್ಟಿವೇಟ್ ಮಾಡಲಾಗಿದೆ.

ನೋಂದಾವಣೆ ಮಾಡಲ್ಪಟ್ಟ ಕಂಪನಿಗಳ ನಿರ್ದೇಶಕರು ಸರ್ಕಾರಕ್ಕೆ ಕೆವೈಸಿ ಸಲ್ಲಿಸುವುದು ಕಡ್ಡಾಯ ಎಂದು ಜೂನ್ ನಲ್ಲೇ ಸರ್ಕಾರ ತಿಳಿಸಿತ್ತು. ಅದಕ್ಕಾಗಿ ಶುಲ್ಕರಹಿತವಾಗಿ ಸಲ್ಲಿಸಲು ಸೆ.15 ರವರೆಗೆ ಸಮಯಾವಕಾಶವನ್ನೂ ನೀಡಿತ್ತು. 31 ಲಕ್ಷ ನೋಂದಾವಣೆ ಮಾಡಲ್ಪಟ್ಟ ನಿರ್ದೇಶಕರಲ್ಲಿ ಸುಮಾರು 12.16 ಲಕ್ಷ ಮಂದಿ ಯಶಸ್ವಿಯಾಗಿ ಕೆವೈಸಿ ಸಲ್ಲಿಸಿದ್ದಾರೆ.

ಉಳಿದ 21 ಲಕ್ಷ ಮಂದಿ ಸಲ್ಲಿಸಿಲ್ಲ. ಹೀಗಾಗಿ ಡಿ ಆಕ್ಟಿವೇಟ್ ಆಗಿರುವ ನಿರ್ದೇಶಕರು 5 ಸಾವಿರ ರೂ. ದಂಡದೊಂದಿಗೆ ನಿಗದಿತ ಅರ್ಜಿ ಸಲ್ಲಿಸಬೇಕು. ಬಳಿಕವಷ್ಟೇ ರೀ ಆಕ್ಟಿವೇಟ್ ಆಗಲಿದೆ ಎಂದು ಉದ್ಯಮ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...