alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕ ವೃತ್ತಿ ಬಯಸುವವರಿಗೆ ಬಂಪರ್: 8000ಕ್ಕೂ ಹೆಚ್ಚು ಹುದ್ದೆಗೆ ಅರ್ಜಿ ಆಹ್ವಾನ

ಕೇಂದ್ರೀಯ ವಿದ್ಯಾಲಯ 8339 ಬೋಧಕರು ಹಾಗೂ ಬೋಧಕೇತರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಗಸ್ಟ್ 24 ರಿಂದಲೇ ಆನ್ಲೈನ್ ಅರ್ಜಿ ಪ್ರಕ್ರಿಯೆ ಶುರುವಾಗಿದೆ. ಸೆಪ್ಟೆಂಬರ್ 13ರವರೆಗೆ ಅರ್ಜಿ ತುಂಬಲು ಅವಕಾಶವಿದೆ. ಪ್ರಾಂಶುಪಾಲ, ಉಪ ಪ್ರಾಂಶುಪಾಲ, ಪಿಜಿಟಿ ಹಾಗೂ ಗ್ರಂಥಪಾಲಕ ಮತ್ತು ಪ್ರೈಮರಿ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಆಸಕ್ತ ಅಭ್ಯರ್ಥಿಗಳು ಕೊನೆ ದಿನಾಂಕದ ಮೊದಲು ಅರ್ಜಿ ಸಲ್ಲಿಸಬೇಕು. ಕೇಂದ್ರೀಯ ವಿದ್ಯಾಲಯದ ಅಧಿಕೃತ ವೆಬ್ಸೈಟ್ kvsangathan.nic.in ನಲ್ಲಿ ಹೆಚ್ಚಿನ ಮಾಹಿತಿ ಲಭ್ಯವಿದೆ. ವಿದ್ಯಾರ್ಹತೆ ಆಧಾರದ ಮೇಲೆ ಹುದ್ದೆಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಖಾಲಿಯಿರುವ ಹುದ್ದೆ : ಪ್ರಿನ್ಸಿಪಾಲ್, ವೈಸ್-ಪ್ರಿನ್ಸಿಪಾಲ್, ಸ್ನಾತಕೋತ್ತರ ಶಿಕ್ಷಕರ (ಪಿಜಿಟಿ), ಟಿಜಿಟಿ, ಲೈಬ್ರರಿಯನ್ ಮತ್ತು ಪ್ರಾಥಮಿಕ ಶಿಕ್ಷಕ

ಹುದ್ದೆ ಸಂಖ್ಯೆ : 8339

ವಿದ್ಯಾರ್ಹತೆ : ಪದವಿ/ಸ್ನಾತಕೋತ್ತರ ಪದವಿ ಜೊತೆಗೆ ಶಿಕ್ಷಕರಾಗಿ ಅನುಭವ ಹೊಂದಿರಬೇಕು. ಪ್ರತಿಯೊಂದು ಹುದ್ದೆಗೂ ಬೇರೆ ಬೇರೆ ವಯಸ್ಸಿನ ಮಿತಿಯಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...