alex Certify
ಕನ್ನಡ ದುನಿಯಾ       Mobile App
       

Kannada Duniya

ಬಂದ್ ಆಗಲಿದ್ಯಾ ಐಡಿಯಾ-ವೊಡಾಫೋನ್ ಹಳೆ ಸಿಮ್?

ಐಡಿಯಾ ಸೆಲ್ಯೂಲರ್ ಹಾಗೂ ವೊಡಾಫೋನ್ ಇಂಡಿಯಾ ವಿಲೀನಕ್ಕೆ ಅಂತಿಮ ಅನುಮೋದನೆ ಸಿಕ್ಕಿದೆ. ಈಗ ಕಂಪನಿಗಳು ಅಗತ್ಯ ಬದಲಾವಣೆಗಳನ್ನು ಮಾಡಲಿವೆ. ದೇಶದ ದೊಡ್ಡ ಟೆಲಿಕಾಂ ಕಂಪನಿಯಾಗಿರುವ ವೊಡಾಫೋನ್ ಇಂಡಿಯಾ ಹಾಗೂ ಐಡಿಯಾ ಸೆಲ್ಯೂಲರ್ ವಿಲೀನದಿಂದ ಯಾವೆಲ್ಲ ಬದಲಾವಣೆಯಾಗಲಿದೆ ಎಂಬ ಪ್ರಶ್ನೆ ಎಲ್ಲರ ಮುಂದಿದೆ.

ಕಂಪನಿ ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಕಂಪನಿ ಹೊಸ ಹೆಸರಿನೊಂದಿಗೆ ಹೊಸ ಸಿಮ್ ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಿದೆ. ಹೊಸ ಸಿಮ್ ಗೆ ಒಂದಿಷ್ಟು ಆಫರ್ ಕೂಡ ನೀಡೋದು ನಿಶ್ಚಿತ. ಈ ಮಧ್ಯೆ ಕಂಪನಿಗಳ ವಿಲೀನದಿಂದ ಹಳೇ ಸಿಮ್ ಕೆಲಸ ಮಾಡಲ್ವಾ ಎಂಬ ಪ್ರಶ್ನೆ ಗ್ರಾಹಕರನ್ನು ಕಾಡ್ತಿದೆ.

ಐಡಿಯಾ ಹಾಗೂ ವೊಡಾಫೋನ್ ವಿಲೀನದ ನಂತ್ರ ಗ್ರಾಹಕರು ಹೊಸ ಸಿಮ್ ಖರೀದಿ ಮಾಡುವ ಅಗತ್ಯವಿಲ್ಲ. ಕಂಪನಿ ತನ್ನ ಸಿಸ್ಟಂನಲ್ಲಿಯೇ ಹಳೆ ಗ್ರಾಹಕರ ಡೇಟಾವನ್ನು ಅಪ್ಡೇಟ್ ಮಾಡಲಿದೆ. ಸಾಮಾಜಿಕ ಜಾಲತಾಣದಲ್ಲಿ ಗ್ರಾಹಕರು ಹೊಸ ಸಿಮ್ ಖರೀದಿ ಮಾಡಬೇಕೆಂಬ ಸುದ್ದಿ ಹರಡಿದೆ. ಆದ್ರೆ ಅದು ಸುಳ್ಳು. ಕಂಪನಿ ಈಗಾಗಲೇ 4ಜಿ ಸೇವೆ ಅನುಸಾರ ತನ್ನ ಸಿಸ್ಟಂನಲ್ಲಿ ಬದಲಾವಣೆ ಮಾಡಿಕೊಂಡಿದೆ. ಹೊಸ ಗ್ರಾಹಕರಿಗೆ ಹೊಸ ಹೆಸರಿನ ಸಿಮ್ ಲಭ್ಯವಾಗಲಿದೆ. ಆದ್ರೆ ಹಳೆ ಗ್ರಾಹಕರು ಏನೂ ಮಾಡಬೇಕಾಗಿಲ್ಲ. ಕಂಪನಿಯೇ ಬದಲಾವಣೆ ಮಾಡಲಿದೆ.

ಸದ್ಯ ವಿಲೀನಕ್ಕೆ ಒಪ್ಪಿಗೆ ಸಿಕ್ಕಿದೆ. ಆದ್ರೆ ಹೊಸ ಕಂಪನಿ ಕೆಲಸ ಶುರು ಮಾಡಿಲ್ಲ. ಹೊಸ ಕಂಪನಿ ಕೆಲಸ ಶುರು ಮಾಡುವವರೆಗೂ ಆಯಾ ಕಂಪನಿ ಗ್ರಾಹಕರಿಗೆ ಆಯಾ ಕಂಪನಿ ಹಳೆ ಪ್ಲಾನ್ ನಲ್ಲಿಯೇ ಡೇಟಾ ನೀಡಲಿದೆ. ಎರಡು ಕಂಪನಿ ವಿಲೀನದಿಂದ ಗ್ರಾಹಕರಿಗೆ ದೊಡ್ಡ ಲಾಭವಾಗಲಿದೆ. ಜಿಯೋಗೆ ಟಕ್ಕರ್ ನೀಡಲು ಕಂಪನಿ ಭರ್ಜರಿ ಆಫರ್ ಶುರು ಮಾಡುವ ಸಾಧ್ಯತೆಯಿದೆ. ಜೊತೆಗೆ ನೆಟ್ವರ್ಕ್ ಸಮಸ್ಯೆ ಹಾಗೂ ಕಾಲ್ ಕಟ್ ಸಮಸ್ಯೆಯಾಗುವುದಿಲ್ಲ ಎಂದು ನಂಬಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...