alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಬಳಕೆದಾರರಿಗೆ ಖುಷಿ ಸುದ್ದಿ

ಕಳೆದ ಕೆಲ ವರ್ಷಗಳಿಂದ ಇಂಟರ್ ನೆಟ್ ಬಳಕೆದಾರರ ಜೀವಾಳವಾಗಿದೆ ವಾಟ್ಸಾಪ್. ಸಂದೇಶ, ಫೋಟೋ, ವಿಡಿಯೋ ರವಾನೆ, ಕಾಲಿಂಗ್, ವಿಡಿಯೋ ಕಾಲಿಂಗ್ ಸೇರಿದಂತೆ ಅನೇಕ ಫೀಚರ್ ಗಳು ಇದ್ರಲ್ಲಿವೆ. ಭಾರತದಲ್ಲಿ 20 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ನಿರಂತರವಾಗಿ ಫೀಚರ್ ನಲ್ಲಿ ಬದಲಾವಣೆ ತರ್ತಿರುತ್ತದೆ.

ಕೆಲ ದಿನಗಳ ಹಿಂದಷ್ಟೇ ಸುಳ್ಳು ಮಾಹಿತಿ ರವಾನೆ ತಪ್ಪಿಸಲು ಫಾರ್ವರ್ಡ್ ಫೀಚರ್ ತೆಗೆದು ಹಾಕಿದೆ. ವಾಟ್ಸಾಪ್ ವೈಶಿಷ್ಟ್ಯಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ವಾಟ್ಸಾಪ್,  ಇಂಗ್ಲೀಷ್ ಅಲ್ಲದೆ ಭಾರತದ ಅನೇಕ ಭಾಷೆಗಳಲ್ಲಿ ತನ್ನ ಸೇವೆ ನೀಡ್ತಿದೆ. ಇಂಗ್ಲೀಷ್ ಜೊತೆ ಹಿಂದಿ, ಕನ್ನಡ, ಬೆಂಗಾಲಿ, ಪಂಜಾಬಿ, ತೆಲುಗು, ಮರಾಠಿ, ತಮಿಳು, ಉರ್ದು, ಗುಜರಾತಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಂದೇಶ ರವಾನೆ ಮಾಡಬಹುದಾಗಿದೆ.

ಅನೇಕರಿಗೆ ತಮ್ಮ ಮಾತೃಭಾಷೆಯನ್ನು ವಾಟ್ಸಾಪ್ ನಲ್ಲಿ ಹೇಗೆ ಬಳಸಬೇಕೆಂಬ ಬಗ್ಗೆ ತಿಳಿದಿಲ್ಲ. ಇದಕ್ಕೆ ನೀವು ಸೆಟ್ಟಿಂಗ್ ನಲ್ಲಿ ಸಣ್ಣ ಬದಲಾವಣೆ ಮಾಡಿದ್ರೆ ಸಾಕು. ವಾಟ್ಸಾಪ್ ಮೆನ್ಯೂ ಬಟನ್ ಗೆ ಹೋಗಿ ಸೆಟ್ಟಿಂಗ್ ಕ್ಲಿಕ್ ಮಾಡಬೇಕು. ಅಲ್ಲಿ ಚಾಟ್ ಆಪ್ಶನ್ ಗೆ ಹೋಗಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ವಾಟ್ಸಾಪ್ ನಿಮ್ಮ ಫೋನ್ ಭಾಷೆಯನ್ನು ಓದಬಲ್ಲದಾಗಿದೆ. ನಿಮ್ಮ ಫೋನ್ ಭಾಷೆ ಬದಲಾದ್ರೆ ವಾಟ್ಸಾಪ್ ಕೂಡ ಅದೇ ಭಾಷೆಯಲ್ಲಿ ಕೆಲಸ ಮಾಡಲು ಶುರು ಮಾಡುತ್ತದೆ. ಹಾಗಾಗಿ ವಾಟ್ಸಾಪ್ ಭಾಷೆ ಬೇರೆ, ಫೋನ್ ಭಾಷೆ ಬೇರೆ ಮಾಡಲು ಸೆಟ್ಟಿಂಗ್ ನಲ್ಲಿ ಬದಲಾವಣೆ ಮಾಡಬೇಕು. ಆಂಡ್ರಾಯ್ಡ್ ಫೋನ್ ನಿಮ್ಮದಾಗಿದ್ದರೆ ಮೊದಲು ಸೆಟ್ಟಿಂಗ್ ಗೆ ಹೋಗಿ ಅಲ್ಲಿ ಲಾಂಗ್ವೇಜ್ ಹಾಗೂ ಇನ್ಪುಟ್ ಸೆಲೆಕ್ಟ್ ಮಾಡಬೇಕು. ಅಲ್ಲಿ ಲಾಂಗ್ವೇಜ್ ಸೆಲೆಕ್ಟ್ ಮಾಡಬೇಕು.ಇದಾದ ನಂತ್ರ ವಾಟ್ಸಾಪ್ ನೀವು ಸೆಲೆಕ್ಟ್ ಮಾಡಿದ ಭಾಷೆಯಲ್ಲಿ ಕೆಲಸ ಶುರು ಮಾಡುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...