alex Certify
ಕನ್ನಡ ದುನಿಯಾ       Mobile App
       

Kannada Duniya

ರಿಲಾಯನ್ಸ್ ಜಿಯೋ ಸಿಮ್ ಪಡೆಯಲು ಹೀಗೆ ಮಾಡಿ….

Know how to port your existing phone number to Reliance Jio

ರಿಲಾಯೆನ್ಸ್ ಜಿಯೋ ಎಬ್ಬಿಸಿರುವ ಅಲೆಯಿಂದಾಗಿ ಇತರೆ ಟೆಲಿಕಾಂ ಕಂಪನಿಗಳು ತತ್ತರಿಸಿ ಹೋಗಿವೆ. ಜಿಯೋ ವಿಶೇಷತೆಗಳನ್ನು ಮುಕೇಶ್ ಅಂಬಾನಿ ಬಿಚ್ಚಿಡುತ್ತಿದ್ದಂತೆ ಉಳಿದ ಟೆಲಿಕಾಂ ಕಂಪನಿಗಳ ಷೇರುಗಳ ಬೆಲೆ ಪಾತಾಳಕ್ಕಿಳಿದಿದೆ.

ರಿಲಾಯನ್ಸ್ ಮೊಬೈಲ್ ಗಳಲ್ಲಿ ಮಾತ್ರ ಜಿಯೋ ಸಿಮ್ ಬಳಸಬೇಕೆಂಬ ಅನಿವಾರ್ಯತೆಯೇನಿಲ್ಲ. ನಿಮ್ಮ ಬಳಿ 4 ಜಿ ಸೌಲಭ್ಯ ಹೊಂದಿರುವ ಸ್ಯಾಮ್ ಸಂಗ್ ಅಥವಾ ಎಲ್ ಜಿ ಮೊಬೈಲ್ ಇದ್ರೆ ನೀವು ಸಹ ಜಿಯೋ ಬಳಕೆದಾರರಾಗಬಹುದು. ಬೇರೆ ನೆಟ್ವರ್ಕ್ ನ ಸಿಮ್ ಕಾರ್ಡ್ ನಿಮ್ಮದಾಗಿದ್ರೆ ಆ ನಂಬರನ್ನು ಉಳಿಸಿಕೊಂಡೇ ಜಿಯೋಗೆ ಪೋರ್ಟ್ ಮಾಡಿಕೊಳ್ಳಬಹುದು.

ನಿಮ್ಮ ಮೊಬೈಲ್ ನಂಬರ್ ನಿಂದ ಪೋರ್ಟ್ ಔಟ್ ರಿಕ್ವೆಸ್ಟ್ ಕಳಿಸಿ. ಪೋರ್ಟ್ ಸ್ಪೇಸ್ ಮೊಬೈಲ್ ನಂಬರ್ ಹಾಕಿ 1900ಗೆ ಕಳಿಸಿ.

1901ನಿಂದ ನಿಮಗೆ ಪೋರ್ಟ್ ಯುನಿಕ್ ಕೋಡ್ ಎಸ್ ಎಂ ಎಸ್ ಬರುತ್ತದೆ. 15 ದಿನಗಳವರೆಗೆ ಇದು ವ್ಯಾಲಿಡ್ ಇರಲಿದೆ. ಅಷ್ಟರಲ್ಲಿ ನೀವು ರಿಲಾಯನ್ಸ್ ಗೆ ಬದಲಾಯಿಸಿಕೊಳ್ಳಬಹುದು.

ರಿಲಾಯನ್ಸ್ ಮೊಬೈಲ್ ಮಳಿಗೆ, ರಿಲಾಯೆನ್ಸ್ ವರ್ಲ್ಡ್ ಅಥವಾ ರಿಟೇಲರ್ ಬಳಿ ಹೋಗಿ ಕಸ್ಟಮರ್ ಅಪ್ಲಿಕೇಷನ್ ಫಾರ್ಮ್ ಅನ್ನು ಭರ್ತಿ ಮಾಡಿ.

ಅಗತ್ಯ ದಾಖಲೆಗಳಾದ ಅಡ್ರೆಸ್ ಪ್ರೂಫ್, ಗುರುತಿನ ಚೀಟಿ ಝೆರಾಕ್ಸ್ ಮತ್ತು ಫೋಟೋಗಳನ್ನು ಒದಗಿಸಿ.

ರಿಲಾಯೆನ್ಸ್ ನಿಮಗೆ ಹೊಸ ಸಿಮ್ ಕಾರ್ಡ್ ಒದಗಿಸುತ್ತದೆ.

ಇದಾಗಿ 6ನೇ ದಿನ ನಿಮ್ಮ ಹಳೆಯ ಸಿಮ್ ತೆಗೆದು ಹೊಸ ರಿಲಾಯೆನ್ಸ್ ಸಿಮ್ ಹಾಕಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...