alex Certify
ಕನ್ನಡ ದುನಿಯಾ       Mobile App
       

Kannada Duniya

3 ನೇ ಬಾರಿ ‘ಕಿಂಗ್ ಫಿಶರ್ ವಿಲ್ಲಾ’ ಹರಾಜು ಕಸರತ್ತು

kingfisher-villa-goa

ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರೋ ವಿಜಯ್ ಮಲ್ಯ ಅವರಿಗೆ ಸೇರಿದ ಕಿಂಗ್ ಫಿಶರ್ ವಿಲ್ಲಾವನ್ನು ಹರಾಜು ಹಾಕಲು ಮೂರನೇ ಬಾರಿಗೆ ಪ್ರಯತ್ನ ನಡೆಯುತ್ತಿದೆ.

ಗೋವಾದ ಪಾರ್ಲೆಯಲ್ಲಿರುವ ಈ ಬಂಗಲೆಯ ಹರಾಜು ಮೊತ್ತವನ್ನು ಶೇ.15 ರಷ್ಟು ಕಡಿಮೆ ಮಾಡಲಾಗಿದ್ದು, 115 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ. 17,000 ಸ್ಕ್ವೇರ್ ಫೀಟ್ ವಿಸ್ತಾರವಾಗಿರುವ ಕಿಂಗ್ ಫಿಶರ್ ವಿಲ್ಲಾವನ್ನು ಡಿಸೆಂಬರ್ 19 ರಂದು ಮೂರನೇ ಬಾರಿಗೆ ಹರಾಜು ಹಾಕಲಾಗ್ತಿದೆ.

ವಿಜಯ್ ಮಲ್ಯ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 9000 ಕೋಟಿ ರೂಪಾಯಿ ಸಾಲ ಪಡೆದು ಅದನ್ನು ಮರುಪಾವತಿಸಿಲ್ಲ. ಹಾಗಾಗಿ ಬ್ಯಾಂಕ್ ಈ ಮನೆಯನ್ನು ಹರಾಜು ಹಾಕಲು ಪ್ರಯತ್ನಿಸುತ್ತಿದೆ. ಮಾರ್ಚ್ ನಲ್ಲಿ 150 ಕೋಟಿ ನಿಗದಿಪಡಿಸಿ ಕಿಂಗ್ ಫಿಶರ್ ವಿಲ್ಲಾವನ್ನು ಹರಾಜಿಗಿಡಲಾಗಿತ್ತು. ಆದ್ರೆ ದುಬಾರಿ ಎಂಬ ಕಾರಣಕ್ಕೆ ಯಾರೂ ಖರೀದಿಗೆ ಮುಂದೆ ಬಂದಿರಲಿಲ್ಲ. ಬಳಿಕ 135 ಕೋಟಿ ರೂಪಾಯಿ ನಿಗದಿ ಮಾಡಿ ಆಗಸ್ಟ್ ನಲ್ಲಿ ಮತ್ತೊಮ್ಮೆ ಹರಾಜಿಗಿಡಲಾಯ್ತು. ಆಗಲೂ ಯಾರೊಬ್ಬರೂ ಬಂಗಲೆಯನ್ನು ಕೊಂಡುಕೊಂಡಿಲ್ಲ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...