alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಸುದ್ದಿ ಮಾಡ್ತಿದೆ ಪತಂಜಲಿ ಆ್ಯಪ್

ಯೋಗ ಗುರು ಬಾಬಾ ರಾಮ್ದೇವ್ ಪತಂಜಲಿ ಕಂಪನಿ ಮೇ ತಿಂಗಳಿನಲ್ಲಿ Kimbho ಆ್ಯಪ್ ಬಿಡುಗಡೆ ಮಾಡಿತ್ತು. ಆದ್ರೆ ವಿವಾದದ ಕಾರಣ ಕೆಲವೇ ಗಂಟೆಗಳಲ್ಲಿ ಆ್ಯಪನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಲಾಗಿತ್ತು. ಈಗ ಮತ್ತೆ ಬೇರೆ ಹೆಸರಿನಲ್ಲಿ ಕಂಪನಿ ಆ್ಯಪ್ ಶುರು ಮಾಡಿದೆ ಎನ್ನಲಾಗ್ತಿದೆ.

Bolo Messenger ಹೆಸರಿನಲ್ಲಿ ಪತಂಜಲಿ ತನ್ನ ಆ್ಯಪ್ ಶುರುಮಾಡಿದೆ ಎನ್ನುವ ಸುದ್ದಿ ಹಬ್ಬಿದೆ. ಆದ್ರೆ ಇದನ್ನು ಪತಂಜಲಿ ತಳ್ಳಿ ಹಾಕಿದೆ. ಪತಂಜಲಿ ವಕ್ತಾರ ಎಸ್.ಕೆ.ತಿಜಾರಾವಾಲ್ Bolo Messenger ಆ್ಯಪ್ ಗೂ ಪತಂಜಲಿ ಆ್ಯಪ್ ಗೂ ಸಂಬಂಧವಿಲ್ಲ ಎಂದಿದ್ದಾರೆ.

ಪತಂಜಲಿ Kimbho ಹೆಸರಿನಲ್ಲಿಯೇ ಆ್ಯಪ್ ಶುರು ಮಾಡಲಿದೆ. ಶೀಘ್ರವೇ ಹೊಸ ರೂಪದಲ್ಲಿ Kimbho ಆ್ಯಪ್ ಬಿಡುಗಡೆಯಾಗಲಿದೆ ಎಂದಿದ್ದಾರೆ. ಇನ್ನು ಬೊಲೊ ಆ್ಯಪ್ ರಚಿಸಿರುವ ಆದಿತ್ಯ ಕಮಲ್ ಇದು ಭಾರತೀಯರು ಭಾರತೀಯರಿಗಾಗಿ ರಚಿಸಿದ ಆ್ಯಪ್ ಎನ್ನುತ್ತಿದ್ದಾರೆ. ಸದ್ಯ ಗೂಗಲ್ ಸ್ಟೋರೇಜ್ ನಲ್ಲಿ ಲಭ್ಯವಿದ್ದು ಶೀಘ್ರವೇ ಐಒಎಸ್ ನಲ್ಲಿ ಸಿಗಲಿದೆ ಎಂದಿದ್ದಾರೆ.

ಬೊಲೊ ಆ್ಯಪ್ ವಾಟ್ಸಾಪ್ ಹೋಲುತ್ತದೆ. ಓಪನ್ ಮಾಡ್ತಿದ್ದಂತೆ , Chats, Contacts ಮತ್ತು Activity ಎಂಬ ಮೂರು ಆಯ್ಕೆ ಸಿಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...