alex Certify
ಕನ್ನಡ ದುನಿಯಾ       Mobile App
       

Kannada Duniya

ಕಷ್ಟ ಕಾಲದಲ್ಲಿ ಕೇರಳಿಗರ ಕೈ ಹಿಡಿಯಲಿದೆ ‘ಚಿನ್ನ’…!

ಕೇರಳ ಜನರ ಬಂಗಾರದ ಮೇಲಿನ ಪ್ರೀತಿಯ ಬಗ್ಗೆ ಹೇಳುವ ಅಗತ್ಯ ಇಲ್ಲ. ಬಂಗಾರವೇ ಕಷ್ಟಕಾಲದಲ್ಲಿ ಕೇರಳ ವಾಸಿಗಳ ಕೈ ಹಿಡಿಯಲಿದೆ. ಕೇರಳದಲ್ಲಿ ಪ್ರವಾಹ ಪೀಡಿತರು ಮನೆಗಳನ್ನು ಕಟ್ಟಿಕೊಳ್ಳಲು ಬಂಗಾರವನ್ನು ಮಾರುವ ಇರಾದೆ ಹೊಂದಿರೋದಾಗಿ ಹೇಳಲಾಗಿದೆ.

ಮೂಲಗಳ ಪ್ರಕಾರ ಬಂಗಾರದ ಬದಲಿಗೆ ಸಾಲ ಪಡೆಯಲು, ಕೇರಳ ವಾಸಿಗಳು ಮುಂದಾಗಲಿದ್ದಾರೆ. ಇದರ ಪರಿಣಾಮ ಮುತ್ತೂಟ್ ಮತ್ತು ಮಣಪುರಃ ಫೈನಾನ್ಸ್ ಕಂಪನಿಗಳ ಎದುರು ಜನ ಸರತಿ ಸಾಲಿನಲ್ಲಿ ನಿಂತು, ಬಂಗಾರವನ್ನು ಅಡವಿಟ್ಟು ಸಾಲ ಪಡೆಯಬಹುದು. ಇನ್ನು ಕೆಲವರು ಸ್ಥಳೀಯ ಜ್ಯುವೆಲರಿಗಳ ಮೊರೆ ಹೋಗಬಹುದು ಎಂದು ಹೇಳಲಾಗ್ತಿದೆ.

ಪ್ರತಿ ವರ್ಷ ಈ ವೇಳೆಯಲ್ಲಿ ಕೇರಳದಲ್ಲಿ ಬಂಗಾರದ ವ್ಯಾಪಾರ ಭರ್ಜರಿಯಾಗಿರುತ್ತದೆ. ಮದುವೆ ಹಾಗೂ ಓಣಂಗಾಗಿ ಜನ ಹೆಚ್ಚು ಬಂಗಾರವನ್ನು ಖರೀದಿ ಮಾಡುತ್ತಾರೆ. 2017 ರಲ್ಲಿ ಭಾರತದಲ್ಲಿ ಸುಮಾರು 594 ಟನ್ ಬಂಗಾರದ ಆಭರಣಗಳ ಬೇಡಿಕೆ ಇತ್ತು. ಇದ್ರಲ್ಲಿ ಕೇರಳದಲ್ಲೇ ಸುಮಾರು 106 ಟನ್ ಒಡವೆಗಳ ಮಾರಾಟವಾಗಿದೆ ಎನ್ನಲಾಗಿದೆ.

ಕೇರಳದಲ್ಲಿನ ಜನ ವಿವಿಧ ಸಂಸ್ಥೆಗಳಲ್ಲಿ ತಮ್ಮ ಬಂಗಾರವನ್ನು ಅಡವಿಟ್ಟಿದ್ದು, ಈ ಚಿನ್ನಕ್ಕೂ ಹಾನಿಯಾಗಿರುವ ಶಂಕೆ ವ್ಯಕ್ತವಾಗಿತ್ತು. ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ಮುತ್ತೂಟ್ ಫೈನಾನ್ಸ್ ಎಂ.ಡಿ. ನಮ್ಮ ಸಂಸ್ಥೆಯಲ್ಲಿ ಇಟ್ಟ ಬಂಗಾರ ಸುರಕ್ಷಿತವಾಗಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...