alex Certify
ಕನ್ನಡ ದುನಿಯಾ       Mobile App
       

Kannada Duniya

ಬೈಕ್ ಪ್ರಿಯರಿಗೆ ಕವಾಸಕಿ ಕಂಪನಿಯಿಂದ ಗುಡ್ ನ್ಯೂಸ್

ಕವಾಸಕಿ ಕಂಪನಿ ಬೈಕ್ ಖರೀದಿದಾರರಿಗೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ಕಂಪನಿಯ ವಿವಿಧ ಮಾಡೆಲ್ ಬೈಕ್ ಗಳ ಮೇಲೆ 4 ಲಕ್ಷ ರೂಪಾಯಿವರೆಗೂ ರಿಯಾಯಿತಿ ಸಿಗಲಿದೆ. ಜಪಾನ್ ಮೂಲದ ಕವಾಸಕಿ ಕಂಪನಿ, ಸತತ ನಾಲ್ಕನೇ ಬಾರಿಗೆ ವರ್ಲ್ಡ್ ಸೂಪರ್ ಬೈಕ್ ಚಾಂಪಿಯನ್ಷಿಪ್ ಗೆದ್ದುಕೊಂಡಿದೆ.

ಕತಾರ್ ನಲ್ಲಿ ಈ ಚಾಂಪಿಯನ್ಷಿಪ್ ನಡೆದಿತ್ತು. ಈ ಹಿನ್ನೆಲೆಯಲ್ಲಿ Ninja 300, Z 1000, Ninja ZX-10R ಬೈಕ್ ಗಳನ್ನು ಖರೀದಿಸುವವರಿಗೆ ಡಿಸ್ಕೌಂಟ್ ನೀಡುತ್ತಿದೆ. Ninja 300 ಬೈಕ್ ಗೆ ದೆಹಲಿಯಲ್ಲಿ 41,000 ರೂಪಾಯಿ ರಿಯಾಯಿತಿ ದೊರೆಯಲಿದೆ.

ಮುಂಬೈ ಗ್ರಾಹಕರು 60,000 ರೂ. ಡಿಸ್ಕೌಂಟ್ ಪಡೆಯಬಹುದು. Z1000 ಬೈಕ್ ಮೇಲೆ 3 ಲಕ್ಷ ರೂಪಾಯಿ ವರೆಗೂ ರಿಯಾಯಿತಿ ನೀಡಲಾಗುತ್ತಿದೆ. Z1000, Z1000 R, Ninja ZX-10R ಮತ್ತು ZX-10RR ಬೈಕ್ ಗಳ ಖರೀದಿ ಮೇಲೆ 2.5 ಲಕ್ಷ ರೂ. ನಿಂದ 4 ಲಕ್ಷ ರೂಪಾಯಿ ವರೆಗೂ ರಿಯಾಯಿತಿ ದೊರೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...