alex Certify
ಕನ್ನಡ ದುನಿಯಾ       Mobile App
       

Kannada Duniya

ಹರಾಜಿಗಿದೆ ದೇಶದ 2 ಪ್ರಮುಖ ರೈಲು ನಿಲ್ದಾಣ

601451-kanpuarcen

ಸಾರ್ವಜನಿಕ ಖಾಸಗಿ ಪಾಲುದಾರಿಕೆ ಅಡಿಯಲ್ಲಿ ಸರ್ಕಾರ ಕೆಲವೊಂದು ಪ್ರಮುಖ ರೈಲು ನಿಲ್ದಾಣಗಳನ್ನು ಹರಾಜು ಹಾಕ್ತಿದೆ. ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲೆಂದೇ ಉತ್ತರಪ್ರದೇಶದ ಕಾನ್ಪುರ ಮತ್ತು ಅಲಹಾಬಾದ್ ಜಂಕ್ಷನ್ ಅನ್ನು ಹರಾಜಿಗಿಟ್ಟಿದೆ. ಜೂನ್ 28ರಂದು ಆನ್ ಲೈನ್ ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಆಸಕ್ತರು ರೈಲ್ವೆ ವೆಬ್ ಸೈಟ್ ಗೆ ಲಾಗಿನ್ ಆಗಿ ಬಿಡ್ ಸಲ್ಲಿಸಬಹುದು. ಹರಾಜಿನಲ್ಲಿ ಕಾನ್ಪುರ ಜಂಕ್ಷನ್ ಗೆ 200 ಕೋಟಿ ಹಾಗೂ ಅಲಹಾಬಾದ್ ಜಂಕ್ಷನ್ ಗೆ 150 ಕೋಟಿ ರೂಪಾಯಿ ಮೂಲ ಬೆಲೆಯನ್ನು ನಿಗದಿಪಡಿಸಲಾಗಿದೆ. ಜೂನ್ 30ರಂದು ಹರಾಜು ಪ್ರಕ್ರಿಯೆಯ ಫಲಿತಾಂಶ ಪ್ರಕಟಿಸಲಾಗುವುದು.

ಬೆಂಗಳೂರು, ಮುಂಬೈನ ಲೋಕಮಾನ್ಯ ತಿಲಕ್ ನಿಲ್ದಾಣ, ಪುಣೆ, ಥಾಣೆ, ವಿಶಾಖಪಟ್ಟಣಂ, ಹೌರಾ, ಅಲಹಾಬಾದ್, ಕಾಮಾಖ್ಯ, ಫರೀದಾಬಾದ್, ಜಮ್ಮು ತಾವಿ, ಬೆಂಗಳೂರು ಕಂಟೋನ್ಮೆಂಟ್, ಭೋಪಾಲ್, ಮುಂಬೈ ಸೆಂಟ್ರಲ್, ಬೋರಿವಿಲಿ ಹಾಗೂ ಇಂದೋರ್ ಸೇರಿ ಒಟ್ಟು 25 ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆ ಹಾಕಿಕೊಂಡಿದೆ.

ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್ ಫಾರಂ, ಲಾಂಜ್, ಹೋಟೆಲ್ – ಮಾಲ್ ನಿರ್ಮಾಣ, ಮಲ್ಟಿಪ್ಲೆಕ್ಸ್ ಮತ್ತು ಇತರ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲು ಬಿಡ್ಡರ್ ಗಳಿಗೆ ಅವಕಾಶವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...