alex Certify
ಕನ್ನಡ ದುನಿಯಾ       Mobile App
       

Kannada Duniya

ಶರ್ಟ್ ನಲ್ಲೇ ಬಳಸಿ ಸಾಮಾಜಿಕ ತಾಣ….

SMART SHIRTಮೊಬೈಲ್ ಆಯ್ತು, ವಾಚ್ ಆಯ್ತು ಈಗ ಶರ್ಟ್ ಕೂಡ ಸ್ಮಾರ್ಟ್ ಆಗಿದೆ. ಪ್ರಸಿದ್ಧ ಬಟ್ಟೆ ತಯಾರಕ ಕಂಪನಿ ಆ್ಯರೋ ಪುರುಷರಿಗಾಗಿ ಸ್ಮಾರ್ಟ್ ಶರ್ಟ್ ಗಳನ್ನು ಲಾಂಚ್ ಮಾಡಿದೆ.

ಶರ್ಟ್ ನ ಪಟ್ಟಿಯ ಮೇಲೆ ನೀವು ಒಮ್ಮೆ ಟ್ಯಾಪ್ ಮಾಡಿದ್ರೆ ಸಾಕು ನಿಮ್ಮLinkedIn ಪ್ರೊಫೈಲ್, ಫೇಸ್ ಬುಕ್ ಪ್ರೊಫೈಲ್, ಬ್ಯುಸಿನೆಸ್ ಕಾರ್ಡ್ ಎಲ್ಲವನ್ನೂ ಶೇರ್ ಮಾಡಬಹುದು. ಸ್ಮಾರ್ಟ್ ಫೋನನ್ನು ಮುಟ್ಟದೆಯೇ ಶರ್ಟಿನ ತೋಳಿನ ಗುಂಡಿಯ ಮೂಲಕ ಸಾಮಾಜಿಕ ತಾಣಗಳನ್ನು ನೀವು ಬಳಸಬಹುದು.

ಈ ಸ್ಮಾರ್ಟ್ ಶರ್ಟ್ ನ ತೋಳಿನಲ್ಲಿ ಎನ್ ಎಫ್ ಸಿ ಚಿಪ್ ಅಳವಡಿಸಲಾಗಿದೆ. ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಆ್ಯರೋ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಆಮೇಲೆ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಜಸ್ಟ್ ಶರ್ಟ್ ನ ಬಟನ್ ಗೆ ಟಚ್ ಮಾಡಿ. ವಾಟ್ಸಾಪ್, ಫೇಸ್ ಬುಕ್, ಟ್ವಿಟ್ಟರ್ ಎಲ್ಲವನ್ನೂ ಬಳಸಿ. ಹೀಗೆ ಸ್ಮಾರ್ಟ್ ಫೋನನ್ನು ಬಟನ್ ಗೆ ತಾಗಿಸುವ ಮೂಲಕ ಸೈಲೆಂಟ್ ಮೋಡ್ ನಿಂದ ವೈಬ್ರೇಶನ್ ಮೋಡ್ ಗೆ ತರಬಹುದು. ಬ್ಲೂಟೂತ್ ಕನೆಕ್ಟ್ ಮಾಡಬಹುದು. ಪ್ಲೇ ಲಿಸ್ಟ್ ಓಪನ್ ಮಾಡಿ ಇಷ್ಟವಾದ ಹಾಡು ಕೇಳಬಹುದು. ಈ ಸ್ಮಾರ್ಟ್ ಶರ್ಟ್ ನ ಬೆಲೆ 2,999 ರೂಪಾಯಿ. 11 ವಿಧದ ಕಲರ್ ಗಳಲ್ಲಿ ಇದು ಲಭ್ಯವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...