alex Certify
ಕನ್ನಡ ದುನಿಯಾ       Mobile App
       

Kannada Duniya

4 ಲಕ್ಷ ರೂ. ಹೂಡಿಕೆಯಲ್ಲಿ ಸ್ಥಾಪಿಸಬಹುದು ಈ ಉದ್ಯಮ

ಹಣ ಗಳಿಸೋದು ಪ್ರತಿಯೊಬ್ಬರ ಆಸೆ. ಆದ್ರೆ ಹೆಚ್ಚೆಚ್ಚು ಹಣ ಗಳಿಸಲು ಉದ್ಯಮದಲ್ಲಿ ಒಳ್ಳೊಳ್ಳೆ ಐಡಿಯಾ ಬೇಕಾಗುತ್ತದೆ. ನಾವು ಒಳ್ಳೆ ಕ್ಷೇತ್ರಗಳನ್ನು ಆಯ್ದುಕೊಂಡು ವ್ಯಾಪಾರ ಶುರುಮಾಡಿದ್ರೆ ಕೈ ತುಂಬ ಹಣ ಗಳಿಸಬಹುದು. ಇದಕ್ಕೆ ಮೋದಿ ಸರ್ಕಾರ ಕೂಡ ನೆರವು ನೀಡುತ್ತದೆ.

ಕಡಿಮೆ ಖರ್ಚಿನಲ್ಲಿ ಕೈ ತುಂಬಾ ಆದಾಯ ಗಳಿಸುವ ವ್ಯಾಪಾರದಲ್ಲಿ ಸೋಪ್ ಉದ್ಯಮ ಕೂಡ ಒಂದು. ಕೇವಲ 4 ಲಕ್ಷ ರೂಪಾಯಿಯಲ್ಲಿ ನೀವು ಈ ಉದ್ಯಮ ಶುರು ಮಾಡಬಹುದಾಗಿದೆ. ಸೋಪ್ ತಯಾರಿಕೆಯಿಂದ ಹಿಡಿದು ಪ್ಯಾಕಿಂಗ್ ವರೆಗೆ ನಿಮಗೆ 4 ಲಕ್ಷ ರೂಪಾಯಿ ಖರ್ಚು ಬೀಳುತ್ತದೆ.

ಏಳು ತಿಂಗಳಲ್ಲಿ ಸೋಪ್ ತಯಾರಿಸುವ ಎಲ್ಲ ಔಪಚಾರಿಕ ಕೆಲಸ ಪೂರ್ಣಗೊಳಿಸಿ ಸೋಪ್ ಉತ್ಪಾದನೆ ಶುರು ಮಾಡಬಹುದು. ಒಂದು ವರ್ಷದಲ್ಲಿ ಅಂದಾಜು ನಾಲ್ಕು ಲಕ್ಷ ಕಿಲೋ ಉತ್ಪನ್ನ ತಯಾರಿಸಬಹುದಾಗಿದೆ. ಇದಕ್ಕೆ ನಿಮಗೆ 47 ಲಕ್ಷ ರೂಪಾಯಿ ಖರ್ಚು ಬರುತ್ತದೆ. ಆದ್ರೆ ಅದ್ರಲ್ಲಿ ನಿಮಗೆ 6 ಲಕ್ಷದವರೆಗೆ ವಾರ್ಷಿಕ ಆದಾಯ ಸಿಗುತ್ತದೆ.

ಈ ಉದ್ಯಮ ಶುರು ಮಾಡಲು ನಿಮಗೆ 750 ಚದರ ಅಡಿ ವಿಸ್ತೀರ್ಣದ ಜಾಗ ಬೇಕು. ಇದ್ರಲ್ಲಿ ಮಶಿನ್ ಸೇರಿದಂತೆ 8 ಉಪಕರಣಗಳನ್ನು ಇಡಬಹುದಾಗಿದೆ. ಮಷಿನ್ ಸೇರಿದಂತೆ ಉಪಕರಣಕ್ಕೆ 1 ಲಕ್ಷ ರೂಪಾಯಿ ಖರ್ಚಾಗಲಿದ್ದು, ನಿಮಗೆ ಸಾಲ ಸಿಗಲಿದೆ.

ಈ ಉದ್ಯೋಗಕ್ಕಾಗಿ ಮೋದಿ ಸರ್ಕಾರ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸಾಲ ನೀಡಲಿದೆ. ಈ ಯೋಜನೆ ಶುರು ಮಾಡುವ ಪ್ಲಾನ್ ನಲ್ಲಿದ್ದರೆ ನೀವು http://www.mudra.org.in/ ಸಂಪರ್ಕಿಸಿ. ಅಲ್ಲಿ ನಿಮಗೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...