alex Certify
ಕನ್ನಡ ದುನಿಯಾ       Mobile App
       

Kannada Duniya

ಶೇ.30 ರಷ್ಟು ಎಟಿಎಂಗಳಲ್ಲಿ ಮಾತ್ರ ಸಿಗ್ತಿದೆ ಹಣ…!

atm76

ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧ ಮಾಡಿ 2 ತಿಂಗಳು ಕಳೆಯುತ್ತಾ ಬಂದಿದೆ. ಆದ್ರೆ ಈಗಲೂ ದೇಶದ ಬಹುತೇಕ ಎಟಿಎಂಗಳಲ್ಲಿ ಹಣ ಸಿಗ್ತಾ ಇಲ್ಲ.

ಶೇ.30 ರಷ್ಟು ಎಟಿಎಂಗಳಲ್ಲಿ ಮಾತ್ರ ಹಣ ದೊರೆಯುತ್ತಿದ್ದು, ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ಕಾರಣ ಬ್ಯಾಂಕುಗಳು ಎಟಿಎಂಗೆ ಹಣ ತುಂಬಿಸುವ ಬದಲು ಕಚೇರಿಯಲ್ಲೇ ಗ್ರಾಹಕರಿಗೆ ಹಣ ವಿತರಿಸಲು ಮುಂದಾಗಿವೆ.

ಸದ್ಯ ದೇಶದಲ್ಲಿ 66,000 ಎಟಿಎಂಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಅಂತಾ ಕಾನ್ಫೆಡರೇಶನ್ ಆಫ್ ಎಟಿಎಂ ಇಂಡಸ್ಟ್ರಿಯ ಮುಖ್ಯಸ್ಥ ಸಂಜೀವ್ ಪಟೇಲ್ ತಿಳಿಸಿದ್ದಾರೆ. ದೇಶದಲ್ಲಿರುವ ಒಟ್ಟು 2.2 ಲಕ್ಷ ಎಟಿಎಂಗಳ ಪೈಕಿ ನೋಟು ನಿಷೇಧದ ನಂತರ ಶೇ.20 ರಷ್ಟು ಎಟಿಎಂ ಯಂತ್ರಗಳಲ್ಲಿ ಮಾತ್ರ ನಿಯಮಿತವಾಗಿ ಹಣ ಭರ್ತಿ ಮಾಡಲಾಗುತ್ತಿದೆ.

ನೋಟು ನಿಷೇಧಕ್ಕೂ ಮುನ್ನ ಬ್ಯಾಂಕುಗಳು ಪ್ರತಿ ಎಟಿಎಂನಲ್ಲಿ ದಿನಕ್ಕೆ 7-8 ಲಕ್ಷ ರೂಪಾಯಿ ಲೋಡ್ ಮಾಡುತ್ತಿದ್ವು, ಈಗ ಆ ಪ್ರಮಾಣ 2-3 ಲಕ್ಷಕ್ಕೆ ಇಳಿದಿದೆ. ಎಟಿಎಂ ಎದುರು ಕ್ಯೂನಲ್ಲಿ ನಿಂತು 2500 ರೂಪಾಯಿ ಪಡೆಯುವುದಕ್ಕಿಂತ ಬ್ಯಾಂಕ್ ಗೆ ಹೋಗಿ ಒಮ್ಮೆಲೇ 24,000 ರೂಪಾಯಿ ಪಡೆಯುವ ಅವಕಾಶವಿತ್ತು. ಎಟಿಎಂನಲ್ಲಿ 10 ಗ್ರಾಹಕರು ಪಡೆಯುವ ಹಣವನ್ನು ಬ್ಯಾಂಕ್ ನಲ್ಲಿ ಒಬ್ಬನೇ ಗ್ರಾಹಕ ಪಡೆಯಬಹುದಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿಟ್ರೆ ಬೇರೆ ಯಾವ ಬ್ಯಾಂಕ್ ಗಳೂ ನಿಯಮಿತವಾಗಿ ಎಟಿಎಂಗಳಲ್ಲಿ ಹಣ ತುಂಬಿಸುತ್ತಿಲ್ಲ. ಹಣ ವಿತ್ ಡ್ರಾ ಮಿತಿಯಲ್ಲಿ ಹೆಚ್ಚಳವಾಗಿದ್ದು, ಎಟಿಎಂಗಳಲ್ಲಿ ಮತ್ತಷ್ಟು ಹಣದ ಕೊರತೆ ಉಂಟಾಗಬಹುದು ಎನ್ನಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...