alex Certify
ಕನ್ನಡ ದುನಿಯಾ       Mobile App
       

Kannada Duniya

ನಿರುದ್ಯೋಗಿಗಳಿಗೆ ‘ಬಂಪರ್ ಸುದ್ದಿ’: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಯು.ಪಿ.ಎಸ್.ಸಿ.

ನಿರುದ್ಯೋಗಿಗಳಿಗೆ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮೀಷನ್ ಬಂಪರ್ ಸುದ್ದಿಯೊಂದನ್ನು ನೀಡಿದೆ. ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಕುರಿತಂತೆ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಸೇನೆಯ 208, ನೌಕಾಪಡೆಯ 42, ಏರ್ ಫೋರ್ಸ್ 92, ನೌಕಾ ಅಕಾಡೆಮಿಯಲ್ಲಿ 50 ಹೀಗೆ ಒಟ್ಟು 392 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ಆನ್ಲೈನ್ ಮೂಲಕ 2019 ರ ಫೆಬ್ರವರಿ 4 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ವಯೋಮಿತಿ, ಅರ್ಜಿ ಶುಲ್ಕ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಯು.ಪಿ.ಎಸ್.ಸಿ. ಯ ಅಧಿಕೃತ ವೆಬ್ಸೈಟ್ ವೀಕ್ಷಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...