alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯರು ಉದ್ಯೋಗ ತೊರೆಯಲು ಇದಂತೆ ಕಾರಣ…!

ಪದೇ ಪದೇ ಕೆಲಸ ಬದಲಾಯಿಸ್ತಾರೆ ಕೆಲವರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಅನೇಕ ದಿನಗಳ ಕಾಲ ಒಂದೇ ಕಂಪನಿಯಲ್ಲಿ ಕೆಲಸ ಮಾಡುವುದಿಲ್ಲ. ಭಾರತದಲ್ಲಿ ಈ ಸಂಖ್ಯೆ ಜಾಸ್ತಿ ಇದೆ. ಬಹಳ ಬೇಗ ಬೇಸರಗೊಳ್ಳುವ ನೌಕರರು, ಒಂದು ಕಂಪನಿ ಬಿಟ್ಟು ಮತ್ತೊಂದು ಕಂಪನಿಯಲ್ಲಿ ಕೆಲಸಕ್ಕೆ ಸೇರ್ತಾರೆ. ಈ ಬಗ್ಗೆ ಸರ್ವೆಯೊಂದು ನಡೆದಿದೆ.

ಸಮೀಕ್ಷೆಯಲ್ಲಿ ಭಾರತೀಯರು ಯಾಕೆ ಕೆಲಸ ಬಿಡ್ತಾರೆ ಎಂಬ ಅಂಶವನ್ನೂ ಹೇಳಿದೆ. ಅದಾಗ್ಯೂ ಕಳೆದ ಕೆಲ ವರ್ಷಗಳಿಂದ ಕೆಲಸ ಬಿಡುವವರ ಸಂಖ್ಯೆ ಕಡಿಮೆಯಾಗ್ತಿದೆ ಎನ್ನುತ್ತೆ ಸರ್ವೇ.

ಕೆಲಸ ಬಿಡಲು ಮುಖ್ಯ ಐದು ಕಾರಣಗಳು :

ಪದೇ ಪದೇ ಕೆಲಸ ಬಿಡಲು ಮುಖ್ಯ ಕಾರಣ ವೇತನ. ಸಮಯಕ್ಕೆ ಸರಿಯಾಗಿ ಸಂಬಳ ಜಾಸ್ತಿಯಾಗುವುದಿಲ್ಲ. ಇದೇ ಸಿಬ್ಬಂದಿ ಅಸಮಾಧಾನಕ್ಕೆ ಮುಖ್ಯ ಕಾರಣ.

ಖಾಸಗಿ ಕಂಪನಿಗಳಲ್ಲಿ ದೊಡ್ಡ ಹಂತಕ್ಕೆ ಬೆಳೆಯಲು ಅವಕಾಶವಿಲ್ಲದಿರುವುದು ಎರಡನೇ ಕಾರಣ.

ಉನ್ನತ ಶಿಕ್ಷಣ ಪಡೆಯಲು ಕೆಲವರು ನೌಕರಿ ಬಿಡ್ತಾರಂತೆ.

ಅನೇಕ ಕಂಪನಿಗಳಲ್ಲಿ ಆಲ್ ರೌಂಡರ್ ಕೆಲಸ ಮಾಡಬೇಕಾದ ಅನಿವಾರ್ಯತೆಯಿಂದಾಗಿ ಸಿಬ್ಬಂದಿ ಕೆಲಸ ಬಿಡ್ತಾರೆ.

ಬಾಸ್ ಜೊತೆ ಸರಿ ಬರದ ಹಿನ್ನೆಲೆಯಲ್ಲಿಯೂ ಅನೇಕ ಭಾರತೀಯರು ಕೆಲಸ ಬದಲಾಯಿಸ್ತಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...