alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯೋಗ: ಇಲ್ಲಿದೆ ಒಂದು ಮುಖ್ಯ ಮಾಹಿತಿ

ನವದೆಹಲಿ: ಜಾಗತೀಕರಣದ ಬಳಿಕ ಕೃಷಿಯೇತರ ಉದ್ಯೋಗಗಳು ಹೆಚ್ಚಳವಾಗಿದ್ದು, ನಿರ್ಮಾಣ ವಲಯದಲ್ಲಿ ಹೆಚ್ಚು ಉದ್ಯೋಗ ಸೃಷ್ಠಿಯಾಗಿವೆ.

ಭಾರತೀಯ ರಿಸರ್ವ್ ಬ್ಯಾಂಕ್ ವತಿಯಿಂದ ಪ್ರಕಟಿಸಲಾದ ಕೆ.ಎಲ್.ಇ.ಎಂ.ಎಸ್. ಇಂಡಿಯಾ ಡೇಟಾದಲ್ಲಿ ಈ ಮಾಹಿತಿ ನೀಡಲಾಗಿದೆ.

ಜಾಗತಿಕರಣ ಪ್ರಕ್ರಿಯೆ ಆರಂಭವಾದ 25 ವರ್ಷಗಳ ಬಳಿಕ ನಿರ್ಮಾಣ, ವ್ಯಾಪಾರ, ಇತರೆ ಸೇವೆ, ಸಾರಿಗೆ, ಶಿಕ್ಷಣ, ಹೋಟೆಲ್, ರೆಸ್ಟೊರೆಂಟ್, ಆಭರಣ, ಆಹಾರ ಉತ್ಪನ್ನ, ಪಾನೀಯ ಆರೋಗ್ಯ, ಇತರೆ ಉತ್ಪಾದನೆ ಮತ್ತು ಸೇವೆಗಳ ವಲಯದಲ್ಲಿ ಉದ್ಯೋಗದ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಕೃಷಿಯೇತರ ಉದ್ಯೋಗ ಹೆಚ್ಚಾದ ಕಾರಣ ಲಕ್ಷಾಂತರ ಮಂದಿ ಕೃಷಿ ಕೆಲಸಗಳಿಂದ ದೂರವಾಗಿದ್ದಾರೆ. 1980 -81 ರಲ್ಲಿ ಸುಮಾರು 7 ಕೋಟಿಯಷ್ಟು ಇದ್ದ ಕೃಷಿಯೇತರ ಉದ್ಯೋಗ 2015 -16 ರಲ್ಲಿ 25 ಕೋಟಿ ದಾಟಿದೆ. ಜಾಗತೀಕರಣದ ಬಳಿಕ ಉದ್ಯೋಗಗಳು ಹೆಚ್ಚಾಗಿವೆ. ಅದರಲ್ಲಿಯೂ ಕಟ್ಟಡ, ಸೇತುವೆ ಮೊದಲಾದ ನಿರ್ಮಾಣ ವಲಯದಲ್ಲಿ ದಾಖಲೆಯ ಪ್ರಮಾಣದ ಉದ್ಯೋಗ ಸೃಷ್ಠಿಯಾಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...