alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಫೋನ್ ಆಗಲಿದೆ ಇನ್ನಷ್ಟು ‘ಸ್ಮಾರ್ಟ್’

ರಿಲಾಯನ್ಸ್ ಜಿಯೋದ ಫೀಚರ್ ಫೋನ್ ನಲ್ಲಿ ಇನ್ಮುದೆ 4ಜಿ ಇಂಟರ್ನೆಟ್ ಬಳಸಬಹುದಾಗಿದೆ. ಅತ್ಯಂತ ಅಗ್ಗದ ಫೋನ್ ಎಂದೇ ಹೆಸರು ಪಡೆದಿರುವ ಜಿಯೋ ಫೋನ್ ನಲ್ಲಿ ಸೀಮಿತ ವೈಶಿಷ್ಟ್ಯಗಳಿವೆ. ಈಗಾಗಲೇ ಜಿಯೋ ಫೋನ್ ಫೇಸ್ಬುಕ್ ಗೆ ಸಪೋರ್ಟ್ ಮಾಡ್ತಾಯಿತ್ತು. ಇನ್ಮುಂದೆ ಗ್ರಾಹಕರು ಫೋನ್ ನಲ್ಲಿ ಗೂಗಲ್ ಟೂಲ್ಸ್ ಕೂಡ ಬಳಸಬಹುದು ಎನ್ನಲಾಗ್ತಿದೆ.

ಜಿಯೋ ಫೋನ್ ನಲ್ಲಿ ಗೂಗಲ್ ಸರ್ಚ್ ಈಗಾಗಲೇ ಚಾಲ್ತಿಯಲ್ಲಿದೆ. ಇನ್ಮುಂದೆ ಗೂಗಲ್ ಮ್ಯಾಪ್, ಗೂಗಲ್ ಅಸಿಸ್ಟೆಂಟ್, ಯುಟ್ಯೂಬ್ ಬಳಸಬಹುದು ಎನ್ನಲಾಗ್ತಿದೆ. ಈ ಫೋನ್ ಗೆ KaiOS ನೀಡಲಾಗಿದೆ. ಇದನ್ನು ಅಮೆರಿಕಾ ಕಂಪನಿ ತಯಾರಿಸಿದೆ.

KaiOS ತಯಾರಿಸುವ ಕಂಪನಿ KaiOS ಟೆಕ್ನಾಲಜಿ ಗೂಗಲ್ ಜೊತೆ ಕೆಲವೊಂದು ಒಪ್ಪಂದ ಮಾಡಿಕೊಂಡಿದೆಯಂತೆ. ಈ ಪಾಲುದಾರಿಕೆಯಲ್ಲಿ ಗೂಗಲ್ ನ ಕೆಲ ಟೂಲ್ಸ್ ಗ್ರಾಹಕರಿಗೆ ಸಿಗಲಿದೆ ಎನ್ನಲಾಗ್ತಿದೆ. ಈ ಕಂಪನಿಯಿಂದ ಜಿಯೋ ಫೋನ್ ಗೆ ಸಾಕಷ್ಟು ಲಾಭವಾಗಿದೆ. KaiOS ಟೆಕ್ನಾಲಜಿ ಗೂಗಲ್ ನಿಂದ 22 ಮಿಲಿಯನ್ ಡಾಲರ್ ಬಂಡವಾಳ ಪಡೆದಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...