alex Certify
ಕನ್ನಡ ದುನಿಯಾ       Mobile App
       

Kannada Duniya

ಗುರುವಾರದಿಂದ ಜಿಯೋ ಉಚಿತ ಫೋನ್ ಬುಕ್ಕಿಂಗ್ ಶುರು

ಜಿಯೋ ಫೋನ್ ಬುಕ್ಕಿಂಗ್ ಗುರುವಾರ ಸಂಜೆ ಐದು ಗಂಟೆಯಿಂದ ಶುರುವಾಗಲಿದೆ. ಜುಲೈ 21ರಂದು ರಿಲಾಯನ್ಸ್ ಇಂಡಸ್ಟ್ರಿ ಈ ಫೋನ್ ಬಿಡುಗಡೆ ಬಗ್ಗೆ ಘೋಷಣೆ ಮಾಡಿತ್ತು. ಇದು ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ. ಭದ್ರತೆಗಾಗಿ ಗ್ರಾಹಕರು ಒಂದು ಬಾರಿ 1500 ರೂಪಾಯಿ ಪಾವತಿಸಬೇಕಾಗುತ್ತದೆ. ಆದ್ರೆ ಕಂಪನಿ ಈ ಹಣವನ್ನು ಮರುಪಾವತಿಸಲಿದೆ. ಈ ಫೋನನ್ನು ಭಾರತದಲ್ಲಿಯೇ ಸಿದ್ಧಪಡಿಸಲಾಗಿದೆ.

ಉಚಿತ ಬುಕ್ಕಿಂಗ್ ಮಾಡಿದ ನಂತ್ರ ಜಿಯೋ ಫೋನ್ ಪಹಲಾ ಆವೋ ಪಹಲೆ ಪಾವೋ ಆಧಾರದ ಮೇಲೆ ಫೋನ್ ನೀಡಲಾಗುವುದು. ಈ ಫೋನ್ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಈ ಫೋನ್ ನಲ್ಲಿ ವೈಸ್ ಕಾಲಿಂಗ್ ಉಚಿತವಾಗಿ ಸಿಗಲಿದೆ. ಜಿಯೋ ಫೋನ್ ನಲ್ಲಿ ಜಿಯೋ ಸಿಮ್ ಹೊಂದಿದ ಗ್ರಾಹಕರಿಗೆ ಅನಿಯಮಿತ ರೂಪದಲ್ಲಿ ಡೇಟಾ ಸಿಗಲಿದೆ.

ಈ ಫೋನ್ ನಲ್ಲಿ ಜಿಯೋ 153 ರೂಪಾಯಿಗೆ ಪ್ರತಿ ತಿಂಗಳು ಉಚಿತ ವೈಸ್ ಕಾಲಿಂಗ್ ಹಾಗೂ ಅನಿಯಮಿತ ಡೇಟಾ ನೀಡಲಿದೆ. ಈ ಫೋನ್ ನಲ್ಲಿ ಜಿಯೋ ಮೆಸ್ಸೇಜಿಂಗ್, ಮನರಂಜನಾ ಆ್ಯಪ್ ಉಚಿತವಾಗಿ ಡೌನ್ಲೋಡ್ ಆಗಲಿದೆ. ಇದ್ರಲ್ಲಿ ಜಿಯೋ ಟಿವಿಯನ್ನು ನೋಡಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...