alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕೋಡ್ ಬಳಸಿದ್ರೆ ಶೇ.15 ರಷ್ಟು ರಿಯಾಯಿತಿಯೊಂದಿಗೆ ಸಿಗಲಿದೆ ಜಿಯೋ ಫೋನ್

ದೇಶದ ಜನಪ್ರಿಯ ಫೋನ್ ಗಳಲ್ಲಿ ಜಿಯೋ ಫೋನ್ ಮೊದಲ ಸ್ಥಾನದಲ್ಲಿದೆ. ಸೋಮವಾರದ ವರದಿ ಪ್ರಕಾರ, 2018 ರ ಸೆಕೆಂಡ್ ಕ್ವಾರ್ಟರ್ ನಲ್ಲಿ ಶೇಕಡಾ 27ರಷ್ಟು ಭಾರತೀಯ ಮಾರುಕಟ್ಟೆಯನ್ನು ಜಿಯೋ ಆವರಿಸಿಕೊಂಡಿದೆ. ಈ ಬೆಳವಣಿಗೆ ನೋಡಿಯೇ ಜಿಯೋ ತನ್ನ ಎರಡನೇ ಫೋನ್ ಬಿಡುಗಡೆ ಮಾಡಿದೆ. ಆದ್ರೆ ಜಿಯೋ ಫೋನ್ 2 ಕೇವಲ ಫ್ಲಾಶ್ ಸೇಲ್ ನಲ್ಲಿ ಮಾತ್ರ ಲಭ್ಯವಿದೆ.

ಸುಲಭವಾಗಿ ಈ ಫೋನ್ ಗ್ರಾಹಕರಿಗೆ ಸಿಗ್ತಿಲ್ಲ. ಫ್ಲಾಶ್ ಸೇಲ್ ನಲ್ಲಿ ಮಾತ್ರ ಫೋನ್ ಪಡೆಯಬಹುದಾಗಿದೆ. ಆದ್ರೆ ಟಾಟಾ CLiQ ನಲ್ಲಿ ಶೇಕಡಾ 15 ರಷ್ಟು ರಿಯಾಯಿತಿಯಲ್ಲಿ ಫೋನ್ ಖರೀದಿ ಮಾಡಬಹುದಾಗಿದೆ. ಮೂಲವೊಂದರ ಪ್ರಕಾರ ಟಾಟಾ CLiQ  ಜಿಯೋದ ಮೂಲ ಬೆಲೆ ಅಂದ್ರೆ 1500 ರೂಪಾಯಿಗೆ ಫೋನ್ ನೀಡ್ತಿದೆ. ಚೆಕ್ ಔಟ್ ವೇಳೆ ನೀವು ICICIWEEKEND ಕೋಡ್ ಬಳಸಬೇಕು.

ಈ ಕೋಡ್ ಸಹಾಯದಿಂದ ನಿಮಗೆ 225 ರೂಪಾಯಿ ರಿಯಾಯಿತಿ ಸಿಗಲಿದೆ. ಅಂದ್ರೆ ಫೋನ್ ಬೆಲೆ 1,275 ರೂಪಾಯಿಗೆ ಸಿಗಲಿದೆ. ಆದ್ರೆ ಇದಕ್ಕೊಂದು ಷರತ್ತಿದೆ. ಐಸಿಐಸಿಐ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ದಾರರಿಗೆ ಮಾತ್ರ ಈ ರಿಯಾಯಿತಿ ಸಿಗಲಿದೆ. ವಿನಿಮಯ ಆಫರ್ ನಲ್ಲಿ ಗ್ರಾಹಕರಿಗೆ 501 ರೂಪಾಯಿಗೆ ಫೋನ್ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...