alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆಗೂ ಜಿಯೋ ಫೋನ್ ಗೆ ಬಂತು ಈ ಸೌಲಭ್ಯ

ಗ್ರಾಹಕರನ್ನು ಆಕರ್ಷಿಸಿರುವ ಜಿಯೋ ಫೋನ್, ಬಳಕೆದಾರರಿಗೆ ಮತ್ತೊಂದು ಖುಷಿ ಸುದ್ದಿ ನೀಡಿದೆ. ಕೆಲ ದಿನಗಳ ಹಿಂದಷ್ಟೇ ಜಿಯೋ ಫೋನ್ ನಲ್ಲಿ ವಾಟ್ಸಾಪ್ ಲಭ್ಯವಾಗಿದೆ. ಈಗ ಜಿಯೋ ಫೋನ್ ಗ್ರಾಹಕರು ಫೋನ್ ನಲ್ಲಿ ಯುಟ್ಯೂಬ್ ಬಳಸಬಹುದಾಗಿದೆ.

ಗ್ರಾಹಕರು ಜಿಯೋ ಸ್ಟೋರ್ ನಲ್ಲಿ ಯುಟ್ಯೂಬ್ ಡೌನ್ಲೋಡ್ ಮಾಡಿಕೊಳ್ಳಬೇಕು. ಆಗಸ್ಟ್ 15ರಂದೇ ಇದು ಬಿಡುಗಡೆಯಾಗಬೇಕಿತ್ತು. ಆದ್ರೀಗ ಗ್ರಾಹಕರಿಗೆ ಯುಟ್ಯೂಬ್ ಲಭ್ಯವಾಗಿದೆ. ಇನ್ಮುಂದೆ ಯುಟ್ಯೂಬ್ ನಲ್ಲಿ ಗ್ರಾಹಕರು ತಮಗಿಷ್ಟ ಬಂದ ವಿಡಿಯೋಗಳನ್ನು ನೋಡಬಹುದಾಗಿದೆ.

ಯುಟ್ಯೂಬ್ ಅಪ್ಲಿಕೇಷನ್ ಬಳಕೆಗೆ ಜಿಯೋ ಫೋನ್ ನ ಹೊಸ ಸಾಫ್ಟ್ ವೇರ್ ಅಗತ್ಯ. ಗ್ರಾಹಕರು ತಮ್ಮ ಜಿಯೋ ಫೋನ್ Settings > Device > Software update ಗೆ ಹೋಗಿ ಅಪ್ಡೇಟ್ ಮಾಡಿದಾಗ ಮಾತ್ರ ಯುಟ್ಯೂಬ್ ಸಿಗಲಿದೆ. ಫೇಸ್ಬುಕ್, ಗೂಗಲ್ ಪ್ಲಸ್ ಹಾಗೂ ಟ್ವೀಟರ್ ಗೆ ಬಳಕೆದಾರರು ವಿಡಿಯೋವನ್ನು ಅಪ್ಲೋಡ್ ಕೂಡ ಮಾಡಬಹುದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...