alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಮನಿ ಮೂಲಕ ಡಿಜಿಟಲ್ ಆಯ್ತು ಸೊಡೆಕ್ಸೊ ಕೂಪನ್

ರಿಲಾಯನ್ಸ್ ಜಿಯೋ ಹಾಗೂ ಸೊಡೆಕ್ಸೊ ಒಪ್ಪಂದ ಮಾಡಿಕೊಂಡಿದೆ. ಡಿಜಿಟಲ್ ವ್ಯವಸ್ಥೆಯನ್ನು ಭಾರತದಲ್ಲಿ ವಿಸ್ತರಿಸಲು ಮಹತ್ವದ ಹೆಜ್ಜೆಯಿಟ್ಟಿದೆ. ವಿವಿಧ ಸಂಸ್ಥೆಗಳ ನೌಕರರಿಗೆ ಆಹಾರ ಪಾಸ್ ನೀಡುವಲ್ಲಿ ಸೊಡೆಕ್ಸೊ ಹೆಸರುವಾಸಿ. ಇದ್ರ ಜೊತೆ ಜಿಯೋ ಕೈಜೋಡಿಸಿದೆ.

ಸೊಡೆಕ್ಸೊ ಕೂಪನ್ ಗಳನ್ನು ಬಳಕೆದಾರರು ಆನ್ಲೈನ್ ಮೂಲಕ ಪಾವತಿ ಮಾಡಬಹುದಾಗಿದೆ. ಸೊಡೆಕ್ಸೊ ಕೂಪನ್ ಪಡೆಯುವ ಕಿರಾಣಿ ಅಂಗಡಿಗಳು, ರೆಸ್ಟೋರೆಂಟ್ ಗಳು, ಕೆಫೆ ವ್ಯಾಪಾರಿಗಳು ಇನ್ಮುಂದೆ ಕೂಪನ್ ಡಿಜಿಟಲ್ ರೂಪದಲ್ಲಿ ಪಡೆಯಬಹುದು. ಜಿಯೋ ಮನಿ ಮೂಲಕ ಇದು ಸಾಧ್ಯವಾಗಲಿದೆ.

ಸೊಡೆಕ್ಸೊ ಮೀಲ್ ಕಾರ್ಡ್ ಹೊಂದಿದವರು ಇದನ್ನು ಜಿಯೋ ಮನಿ ಜೊತೆ ಲಿಂಕ್ ಮಾಡಬೇಕು. ನಂತ್ರ ಎಲ್ಲಿ, ಯಾವಾಗ ಬೇಕಾದ್ರೂ ಕೂಪನ್ ಬಳಸಬಹುದು. ಕೈನಲ್ಲಿ ಸೊಡೆಕ್ಸೊ ಕೂಪನ್ ಇರಬೇಕೆಂದೇನಿಲ್ಲ. ಮುಂಬೈನಲ್ಲಿ ಸೊಡೆಕ್ಸೊ-ಜಿಯೋ ಕೆಲಸ ಶುರು ಮಾಡಿದೆ. ಶೀಘ್ರವೇ ದೇಶದಾದ್ಯಂತ ಸೇವೆ ವಿಸ್ತರಣೆಯಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...