alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋಗಿಂತ ಐದು ಪಟ್ಟು ಹೆಚ್ಚು ಡೇಟಾ ನೀಡಲಿದೆ ಬಿಎಸ್ಎನ್ಎಲ್

ರಿಲಾಯನ್ಸ್ ಜಿಯೋ ಗಿಗಾ ಫೈಬರ್ ಗೆ ಟಕ್ಕರ್ ನೀಡಲು ಬಿಎಸ್ಎನ್ಎಲ್ ಮುಂದಾಗಿದೆ. ತನ್ನ 699 ರೂಪಾಯಿ ಯೋಜನೆಯನ್ನು ಪರಿಷ್ಕರಿಸಿದೆ. ಸದ್ಯ ಇದ್ರ ಲಾಭ ಚೆನ್ನೈ ಗ್ರಾಹಕರಿಗೆ ಸಿಗಲಿದೆ.

ರಿಲಾಯನ್ಸ್ ಜಿಯೋ ಗಿಗಾ ಫೈಬರ್ ನೋಂದಣಿ ಆಗಸ್ಟ್ 15ರಿಂದಲೇ ಶುರುವಾಗಿದೆ. ದೀಪಾವಳಿ ವೇಳೆಗೆ ಇದು ತನ್ನ ಕಾರ್ಯ ಶುರುಮಾಡಲಿದೆ. ಅತಿ ಹೆಚ್ಚು ನೋಂದಣಿಯಾದ ಪ್ರದೇಶಗಳಲ್ಲಿ ಜಿಯೋ ತನ್ನ ಮೊದಲ ಸೇವೆ ಶುರು ಮಾಡಲಿದೆ. ದೇಶದ ಸುಮಾರು 1100 ನಗರಗಳಲ್ಲಿ ಜಿಯೋ ಸೇವೆ ಸಿಗಲಿದೆ. ಜಿಯೋ ತನ್ನ ಗಿಗಾ ಪ್ಲಾನ್ ನಲ್ಲಿ ಪ್ರತಿ ತಿಂಗಳು 100 ಜಿಬಿ ಡೇಟಾ ನೀಡಲಿದೆಯಂತೆ.

ಜಿಯೋದ ಈ ಪ್ಲಾನ್ ಗೆ ಬಿಎಸ್ಎನ್ಎಲ್ 699 ರೂಪಾಯಿ ಪ್ಲಾನ್ ಮೂಲಕ ಸ್ಪರ್ಧೆ ನೀಡಲು ಮುಂದಾಗಿದೆ.ಬಿಎಸ್ಎನ್ಎಲ್ 700 ಜಿಬಿ ಡೇಟಾ ನೀಡಲಿದೆಯಂತೆ. ಜೊತೆಗೆ ವೇಗದಲ್ಲೂ ಹೆಚ್ಚಳವಾಗಲಿದೆಯಂತೆ. ಬಿಎಸ್ಎನ್ಎಲ್ ಗ್ರಾಹಕರಿಗೆ 20 ಎಂಬಿಪಿಎಸ್ ಡೇಟಾ ನೀಡಲಿದೆ. ಇದಲ್ಲದೆ ಗಿಗಾ ಮಾರುಕಟ್ಟೆಗೆ ಬರುವ ಮೊದಲೇ 695 ಹಾಗೂ 799 ರೂಪಾಯಿಯ ಹೊಸ ಎರಡು ಬ್ರಾಡ್ ಬ್ಯಾಂಡ್ ಯೋಜನೆ ಶುರುಮಾಡಲು ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...