alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋಗೆ ಟಕ್ಕರ್ ನೀಡಲು ಏರ್ಟೆಲ್ ಶುರು ಮಾಡಿದೆ ಅಗ್ಗದ ಪ್ಲಾನ್

ರಿಲಯನ್ಸ್ ಜಿಯೋಗೆ ಟಕ್ಕರ್ ನೀಡಲು ಏರ್ಟೆಲ್ ಹೊಸ ಪ್ರಿಪೇಡ್ ಯೋಜನೆಯನ್ನು ಶುರು ಮಾಡಿದೆ. ಜಿಯೋದ ಅಗ್ಗದ ಪ್ಲಾನ್ ಗೆ ಸ್ಪರ್ಧೆಯೊಡ್ಡುವುದು ಇದ್ರ ಉದ್ದೇಶವಾಗಿದೆ. ಏರ್ಟೆಲ್ 195 ರೂಪಾಯಿ ಪ್ಲಾನ್ ಶುರು ಮಾಡಿದ್ದು, ಇದು 25 ದಿನಗಳ ಸಿಂಧುತ್ವ ಹೊಂದಿರಲಿದೆ.

ಏರ್ಟೆಲ್ ನ 195 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ 35 ಜಿಬಿ ಡೇಟಾ ಸಿಗಲಿದೆ. ಅಂದ್ರೆ ಪ್ರತಿ ದಿನ 1.25 ಜಿಬಿ ಡೇಟಾ ಲಭ್ಯವಾಗಲಿದೆ. ಇಂಟರ್ನೆಟ್ ಜೊತೆ ಇನ್ನೂ ಅನೇಕ ಸೌಲಭ್ಯಗಳನ್ನು ಏರ್ಟೆಲ್ ಗ್ರಾಹಕರಿಗೆ ನೀಡ್ತಿದೆ. ಈ ಪ್ಲಾನ್ ನಲ್ಲಿ ಅನಿಯಮಿತ ವಾಯ್ಸ್ ಕಾಲಿಂಗ್ ಸೌಲಭ್ಯ ಸಿಗಲಿದೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕರೆಗಳು ಉಚಿತವಾಗಿದ್ದು, ಯಾವುದೇ ಮಿತಿಯಿಲ್ಲ. ಗ್ರಾಹಕರಿಗೆ ಪ್ರತಿ ದಿನ ಈ ಯೋಜನೆಯಲ್ಲಿ 100 ಎಸ್ಎಂಎಸ್ ಉಚಿತವಾಗಿ ಸಿಗಲಿದೆ.

ಜಿಯೋದ 199 ರೂಪಾಯಿ ಪ್ಲಾನ್ ಹಾಗೂ ವೋಡಾಫೋನ್ ನ 199 ರೂಪಾಯಿ ಪ್ಲಾನ್ ಗೆ ಟಕ್ಕರ್ ನೀಡುವುದು ಏರ್ಟೆಲ್ ಉದ್ದೇಶವಾಗಿದೆ. ಏರ್ಟೆಲ್ ತನ್ನದೇ 199 ರೂಪಾಯಿ ಪ್ಲಾನ್ ಗೂ ಸ್ಪರ್ಧೆಯೊಡ್ಡಲಿದೆ. ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕೇರಳದ ಪ್ರಿಪೇಡ್ ಗ್ರಾಹಕರು ಮಾತ್ರ ಇದ್ರ ಲಾಭ ಪಡೆಯಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...