alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಬಳಕೆದಾರರಿಗೆ ಬಂಪರ್ ಆಫರ್

ಜಿಯೋ ಮಾನ್ಸೂನ್ ಆಫರ್ ನಿನ್ನೆ ಸಂಜೆಯಿಂದ ಆರಂಭವಾಗಿದೆ. ಈ ಬೆನ್ನಲೇ ಸಂಸ್ಥೆಯು ಜಿಯೋ ಫೋನ್ ಬಳಕೆದಾರರಿಗೆ ಹೊಸ ಆಫರ್ ಬಿಡುಗಡೆ ಮಾಡಿದೆ. ಈ ಹೊಸ ಯೋಜನೆಯಲ್ಲಿ ಗ್ರಾಹಕ 99 ರೂಪಾಯಿಗಳ ರಿಚಾರ್ಜ್ ಮಾಡಿದ್ರೆ, ಪ್ರತಿ ದಿನ 500 ಎಂಬಿ ಡಾಟಾ ಸಿಗಲಿದೆ.

ಜಿಯೋ ಕಂಪನಿ ತಿಳಿಸುವಂತೆ ಈ ಹೊಸ ಆಫರ್ನಿಂದ ಗ್ರಾಹಕ ಹಣ ಉಳಿಸಬಹುದಾಗಿದೆ. ಈ ಆಫರ್ ಜೊತೆಗೆ 49 ಹಾಗೂ 153 ರೂಪಾಯಿಗಳ ಹಳೆಯ ಪ್ಲಾನ್ ಮುಂದುವರೆಯಲಿವೆ.

49 ರೂಪಾಯಿ ಪ್ಲಾನ್ ಬಳಕೆ ಮಾಡುವರಿಗೆ ತಿಂಗಳಿಗೆ 1 ಜಿಬಿ ಡಾಟಾ ನೀಡಲಾಗುತ್ತಿದೆ. ಆದ್ರೆ, ಈ ಡಾಟಾ ಗ್ರಾಹಕರಿಗೆ ಕಡಿಮೆ ಅನಿಸುತ್ತಿದೆ. 153 ರೂಪಾಯಿ ರಿಚಾರ್ಜ್ ಮಾಡಿದ್ರೆ, ದಿನಕ್ಕೆ 1.5 ಜಿಬಿ ಫ್ರಿ ಡಾಟಾ ಸಿಗುತ್ತದೆ. ಆದ್ರೆ, ಗ್ರಾಹಕರಿಗೆ ಈ ಪ್ಲಾನ್ ಹೊರೆ ಆಗುತ್ತದೆ. ಇದನ್ನೆಲ್ಲಾ ಅರಿತುಕೊಂಡ ಜಿಯೋ 99 ರೂ. ಆಫರ್ ಜಾರಿಗೆ ತಂದಿದೆ.

ಗ್ರಾಹಕ 594 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಲ್ಲಿ 6 ತಿಂಗಳು ಕಾಲ ಅನ್ಲಿಮಿಟೆಡ್ ಡಾಟ್ ಪಡೆಯಬಹುದಾಗಿದೆ.

ಜನಪ್ರಿಯ ಆ್ಯಪ್ ಗಳಾದ ಫೇಸ್ಬುಕ್, ವಾಟ್ಸಾಪ್ ಮತ್ತು ಯೂಟ್ಯೂಬ್ಗಳನ್ನು ಸಹ ಈಗ ಜಿಯೋ ಫೋನಿನಲ್ಲಿ ಬಳಸಬಹುದಾಗಿದ್ದು, ಆಗಸ್ಟ್ 15 ಕ್ಕೆ ಜಿಯೋ ಫೋನ್ ಅಪ್ಡೇಟ್ ಆಗಲಿದೆ ಎಂದು ಜಿಯೋ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...