alex Certify
ಕನ್ನಡ ದುನಿಯಾ       Mobile App
       

Kannada Duniya

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಜಿಯೋ ನೀಡ್ತಿದೆ ಉದ್ಯೋಗಾವಕಾಶ

ಟೆಲಿಕಾಂ ಕ್ಷೇತ್ರದ ದೈತ್ಯ ರಿಲಾಯನ್ಸ್ ಜಿಯೋ ತನ್ನ ಕ್ಷೇತ್ರ ವಿಸ್ತರಣೆಗಾಗಿ ಬಂಪರ್ ನೇಮಕಾತಿಗೆ ಮುಂದಾಗಿದೆ. ಜಿಯೋ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. 2847 ಹುದ್ದೆಗಳಿಗೆ ಜಿಯೋ ಸೂಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಸೇಲ್ಸ್, ಬ್ಯುಸಿನೆಸ್ ಡೆವಲಪ್ಮೆಂಟ್, ಇಂಜಿನಿಯರ್, ಕಸ್ಟಂ ಸರ್ವಿಸ್, ಆಪರೇಷನ್, ಫೈನಾನ್ಸ್, ಕಾರ್ಪೋರೇಟ್ ಸರ್ವಿಸ್, ಸಪ್ಲೈ ಚೈನ್, ಪ್ರೊಡಕ್ಟ್ ಮ್ಯಾನೇಜ್ಮೆಂಟ್, ಹೆಚ್ ಆರ್ ವಿಭಾಗಕ್ಕೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈಗ್ಲೇ ಅರ್ಜಿ ಸಲ್ಲಿಸಬಹುದು.

ರಿಲಾಯನ್ಸ್ ಜಿಯೋದ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು careers.jio.com ಗೆ ಹೋಗಬೇಕು. ನಂತ್ರ ಸರ್ಚ್ ಜಾಬ್ ಸೆಕ್ಷನ್ ನಲ್ಲಿ ಕ್ಲಿಕ್ ಮಾಡಬೇಕು. ಅಲ್ಲಿ ಯಾವ ಯಾವ ಹುದ್ದೆ, ವಿದ್ಯಾರ್ಹತೆ, ವೇತನ ಸೇರಿದಂತೆ ಎಲ್ಲದರ ವಿವರವಿದೆ. ಹುದ್ದೆ ಮೇಲೆ ಕ್ಲಿಕ್ ಮಾಡಿ ಅರ್ಹರು ಅರ್ಜಿ ಸಲ್ಲಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...