alex Certify
ಕನ್ನಡ ದುನಿಯಾ       Mobile App
       

Kannada Duniya

ನಾಳೆ ಜಿಯೋ ಫೋನ್ 2 ಫ್ಲಾಶ್ ಸೇಲ್: ಇಲ್ಲಿದೆ ಮಹತ್ವದ ಮಾಹಿತಿ

ಜಿಯೋ ಫೋನ್-2 ನ ಎರಡನೇ ಫ್ಲಾಶ್ ಸೇಲ್ ಆಗಸ್ಟ್ 30ರಂದು ನಡೆಯಲಿದೆ. ನಾಳೆ ಮಧ್ಯಾಹ್ನ 12 ಗಂಟೆಗೆ ಫ್ಲಾಶ್ ಸೇಲ್ ಶುರುವಾಗಲಿದೆ. Jio.com ನಲ್ಲಿ ಗ್ರಾಹಕರಿಗೆ ಫೋನ್ ಲಭ್ಯವಾಗಲಿದೆ. ಆಗಸ್ಟ್ 16ರಂದು ಕಂಪನಿ ಮೊದಲ ಬಾರಿ ಫ್ಲಾಶ್ ಸೇಲ್ ಆಯೋಜನೆ ಮಾಡಿತ್ತು. ಅರ್ಧ ಗಂಟೆಯವರೆಗೆ ಖರೀದಿಗೆ ಅವಕಾಶ ನೀಡಿತ್ತು.

ರಿಲಯನ್ಸ್ ಇಂಡಸ್ಟ್ರೀಯ 41ನೇ ವಾರ್ಷಿಕ ಸಭೆಯಲ್ಲಿ ಮುಕೇಶ್ ಅಂಬಾನಿ ಜಿಯೋ ಫೋನ್-2 ಬಗ್ಗೆ ಮಾಹಿತಿ ನೀಡಿದ್ದರು. ಅದಾದ ನಂತ್ರ ಆಗಸ್ಟ್ 16ರಂದು ಮೊದಲ ಫ್ಲಾಶ್ ಸೇಲ್ ನಡೆದಿತ್ತು. ಜಿಯೋ ಫೋನ್ -2 ವನ್ನು ಕಂಪನಿ ಫ್ಲಾಶ್ ಸೇಲ್ ಮೂಲಕ ಮಾರಾಟ ಮಾಡಲು ಮುಂದಾಗಿದೆ. ಮೊದಲ ಸೇಲ್ ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ.

ಜಿಯೋ ಫೋನ್-2ನಲ್ಲಿ ಫೇಸ್ಬುಕ್, ವಾಟ್ಸ್ ಅಪ್, ಯುಟ್ಯೂಬ್ ಹಾಗೂ ಗೂಗಲ್ ಬಳಸಬಹುದಾಗಿದೆ. ಜಿಯೋ ಫೋನ್ -2, 2.4 QVGA ಡಿಸ್ಲ್ಪೇ ಹೊಂದಿದೆ. 512 ಎಂಬಿ ರ್ಯಾಮ್ ಹಾಗೂ 4ಜಿಬಿ ಸ್ಟೋರೇಜ್ ಹೊಂದಿದೆ. ಕಾರ್ಡ್ ಮೂಲಕ ಇದನ್ನು 128 ಜಿಬಿಯವರೆಗೆ ವಿಸ್ತರಿಸಬಹುದಾಗಿದೆ.

2999 ರೂಪಾಯಿ ಫೋನ್ ಖರೀದಿ ಮಾಡಬಯಸುವವರು ಮೊದಲು Jio.comಗೆ ಲಾಗಿನ್ ಆಗಬೇಕು. ನಂತ್ರ ಕೆಂಪು ಬಣ್ಣದ ಫ್ಲಾಶ್ ಸೇಲ್ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತ್ರ ಬೈ ನೌ ಮೇಲೆ ಕ್ಲಿಕ್ ಮಾಡಬೇಕು. ನಂತ್ರ ಪಿನ್ ಕೋಡ್ ನಮೂದಿಸಬೇಕು. ನೀವಿರುವ ಪ್ರದೇಶಕ್ಕೆ ಫೋನ್ ಡಿಲಿವರಿ ಸಾಧ್ಯವೆಂದಾದ್ರೆ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅದ್ರಲ್ಲಿ ವಿಳಾಸ, ಹೆಸರು, ಫೋನ್ ನಂಬರ್ ಸೇರಿದಂತೆ ಎಲ್ಲ ಮಾಹಿತಿ ನೀಡಬೇಕು.

ನಂತ್ರ ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಜಿಯೋ ಮನಿ ಸೇರಿದಂತೆ ನಿಮಗೆ ಅನುಕೂಲವಾಗುವ ರೀತಿ ಹಣ ಪಾವತಿ ಮಾಡಬಹುದು. ಫೋನ್ ಬುಕ್ ಆದ 9 ದಿನಗಳೊಳಗೆ ನಿಮ್ಮ ಕೈನಲ್ಲಿರುತ್ತದೆ. ಡಿಲಿವರಿ ಚಾರ್ಜ್ ರೂಪದಲ್ಲಿ 90 ರೂಪಾಯಿ ನೀಡಬೇಕಾಗುತ್ತದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...