alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ-ಒಪೊ ಮಾನ್ಸೂನ್ ಆಫರ್ ನಲ್ಲಿ ಸಿಗಲಿದೆ 3200 ಜಿಬಿ ಡೇಟಾ

ರಿಲಾಯನ್ಸ್ ಜಿಯೋ ಹಾಗೂ ಒಪ್ಪೊ ಒಂದಾಗಿ ಜಿಯೋ-ಒಪ್ಪೊ ಮಾನ್ಸೂನ್ ಆಫರ್ ಶುರು ಮಾಡಿವೆ. ಈ ಪ್ಲಾನ್ ನಲ್ಲಿ 3200 ಜಿಬಿ ಜಿಯೋ 4 ಜಿ ಡೇಟಾ ಜೊತೆ 4900 ರೂಪಾಯಿಯವರೆಗೆ ಲಾಭ ಪಡೆಯಬಹುದಾಗಿದೆ. ಒಪ್ಪೊ ಫೋನ್ ನಲ್ಲಿ ರಿಲಾಯನ್ಸ್ ಜಿಯೋ ಸಿಮ್ ಬಳಸುವವರು ಮಾತ್ರ ಇದರ ಲಾಭ ಪಡೆಯಲಿದ್ದಾರೆ.

ಈ ಆಫರ್ ನಲ್ಲಿ ಗ್ರಾಹಕರಿಗೆ 1,800 ರೂಪಾಯಿ ತ್ವರಿತ ಕ್ಯಾಶ್ಬ್ಯಾಕ್ ಸಿಗಲಿದೆ. ಮೈ ಜಿಯೋ ಆ್ಯಪ್ ನಲ್ಲಿ 50 ರೂಪಾಯಿಯ 36 ವೋಚರ್ ಸಿಗಲಿದೆ. ಗ್ರಾಹಕರು 198/299 ರೂಪಾಯಿ ರಿಚಾರ್ಜ್ ಮಾಡಿ ಇದ್ರ ಲಾಭ ಪಡೆಯಬಹುದಾಗಿದೆ. ಸೆಪ್ಟೆಂಬರ್ 25 ರೊಳಗೆ ಗ್ರಾಹಕರು ರಿಚಾರ್ಜ್ ಮಾಡಿದ್ರೆ ಮಾತ್ರ ಈ ಆಫರ್ ಸಿಗಲಿದೆ.

ಈ ಯೋಜನೆಯಲ್ಲಿ ಗ್ರಾಹಕರಿಗೆ ಜಿಯೋ ಕ್ರೆಡಿಟ್ ಮನಿ ಕೂಡ ಸಿಗಲಿದೆ. ಮೂರು ಹಂತದಲ್ಲಿ ನಿಮಗೆ ಹಣ ಸಿಗಲಿದೆ. ಪ್ರತಿ ಬಾರಿ 600 ರೂಪಾಯಿ ಸಿಗಲಿದೆ. 13, 26 ಹಾಗೂ 39 ನೇ ರಿಚಾರ್ಜ್ ಗೆ ನಿಮಗೆ ಹಣ ಲಭ್ಯವಾಗಲಿದೆ. ಇದ್ರ ಜೊತೆಗೆ ಪಾಲುದಾರ ಕೂಪನ್ ಕೂಡ ಸಿಗಲಿದೆ. ಮೇಕ್ ಮೈ ಟ್ರಿಪ್ ನಲ್ಲಿ ನಿಮಗೆ 1300 ರೂಪಾಯಿ ರಿಯಾಯಿತಿ ಸಿಗಲಿದೆ. ಈ ಆಫರ್ ಜೂನ್ 28 ರಿಂದ ಶುರುವಾಗಿದೆ. 198 ರೂಪಾಯಿ ಹಾಗೂ 200 ರೂಪಾಯಿ ರಿಚಾರ್ಜ್ ಮಾಡಿದ್ರೆ ಮಾತ್ರ ಗ್ರಾಹಕರು ಇದ್ರ ಲಾಭ ಪಡೆಯಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...