alex Certify
ಕನ್ನಡ ದುನಿಯಾ       Mobile App
       

Kannada Duniya

ಡೌನ್ಲೋಡ್ ವೇಗದಲ್ಲಿ ಮತ್ತೆ ಧಮಾಲ್ ಮಾಡಿದ ಜಿಯೋ

ರಿಲಾಯನ್ಸ್ ಜಿಯೋ ಅಬ್ಬರಿಸಿದೆ. ಡೌನ್ಲೋಡ್ ವೇಗದಲ್ಲಿ ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ಏರ್ಟೆಲನ್ನು ಹಿಂದಿಕ್ಕಿದೆ. ಇತ್ತೀಚಿಗಷ್ಟೆ ಟ್ರಾಯ್ ಬಿಡುಗಡೆ ಮಾಡಿರುವ ವರದಿ ಪ್ರಕಾರ ಐಡಿಯಾ ಅಪ್ಲೋಡ್ ವೇಗದಲ್ಲಿ ಏರಿಕೆಯಾಗಿದೆ. ಏರ್ಟೆಲ್ ಅಪ್ಲೋಡ್ ಹಾಗೂ ಡೌನ್ಲೋಡ್ ವೇಗವೆರಡೂ ಕಡಿಮೆಯಾಗಿದೆ.

ಏಪ್ರಿಲ್ ನಲ್ಲಿ ದೇಶದಲ್ಲಿ ಅತಿ ಹೆಚ್ಚು ಡೌನ್ಲೋಡ್ ವೇಗ ನೀಡಿದ ದೇಶದ ಮೊದಲ 4ಜಿ ಟೆಲಿಕಾಂ ಕಂಪನಿಯಾಗಿದೆ ಜಿಯೋ. ಅದೇ ಐಡಿಯಾ ಅಪ್ಲೋಡ್ ವೇಗದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಮೈಸ್ಪೀಡ್ ಪೋರ್ಟಲ್ ಪ್ರಕಾರ ಏಪ್ರಿಲ್ ನಲ್ಲಿ ಜಿಯೋ ಡೌನ್ಲೋಡ್ ವೇಗ ಪ್ರತಿ ಸೆಕೆಂಡ್ ಗೆ 19 ಮೆಗಾಬೈಟ್ ಇತ್ತು. ಪ್ರತಿಸ್ಪರ್ಧಿ ಕಂಪನಿ ಏರ್ಟೆಲ್ ಡೌನ್ಲೋಡ್ ವೇಗ ಪ್ರತಿ ಸೆಕೆಂಡ್ ಗೆ 9.3 ಎಂಬಿಪಿಎಸ್ ಎಂದು ವರದಿಯಲ್ಲಿ ಹೇಳಲಾಗಿದೆ.

ವೋಡಾಫೋನ್ ಹಾಗೂ ಐಡಿಯಾ ಡೌನ್ಲೋಡ್ ವೇಗ 6.8 ಎಂಬಿಪಿಎಸ್ ಹಾಗೂ 6.5 ಎಂಬಿಪಿಎಸ್ ಇತ್ತು. ಐಡಿಯಾದ ಅಪ್ಲೋಡ್ ವೇಗ 6.3 ಎಂಬಿಪಿಎಸ್ ಆಗಿತ್ತು. ವೋಡಾಫೊನ್ ಅಪ್ಲೋಡ್ ವೇಗ 5.2 ಎಂಬಿಪಿಎಸ್ ಆದ್ರೆ ಜಿಯೋ ವೇಗ 4.8 ಎಂಬಿಪಿಎಸ್ ಆಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...