alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಚಾಕೋಲೇಟ್ ಖರೀದಿ ಮಾಡಿದ್ರೆ ಜಿಯೋ ನೀಡಲಿದೆ ಉಚಿತ ಡೇಟಾ

ಎರಡನೇ ವರ್ಷಾಚರಣೆ ಸಂಭ್ರಮದಲ್ಲಿರುವ ರಿಲಯನ್ಸ್ ಜಿಯೋ ಗ್ರಾಹಕರಿಗೆ 1 ಜಿಬಿ ಉಚಿತ 4ಜಿ ಡೇಟಾ ನೀಡ್ತಿದೆ. ಕಂಪನಿ ಈ ಡೇಟಾವನ್ನು ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೋಲೇಟ್ ಖರೀದಿ ಮಾಡಿದ ಗ್ರಾಹಕರಿಗೆ ನೀಡ್ತಿದೆ. ಚಂದಾದಾರರು ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೋಲೇಟ್ ನ ರ್ಯಾಪರ್ ನೀಡಬೇಕು.

ಡೈರಿ ಮಿಲ್ಕ್ ಕ್ರ್ಯಾಕಲ್, ಡೈರಿ ಮಿಲ್ಕ್ ರೋಸ್ಟ್ ಅಲ್ಮಂಡ್, ಡೈರಿ ಮಿಲ್ಕ್ ಫ್ರೂಟ್ ಎಂಡ್ ನಟ್ ಸೇರಿದಂತೆ ಅನೇಕ ಫ್ಲೇವರ್ ಚಾಕೋಲೇಟ್ ರ್ಯಾಪರ್ ಮೂಲಕ ಹೆಚ್ಚುವರಿ ಡೇಟಾ ಪಡೆಯಬಹುದಾಗಿದೆ. ಗ್ರಾಹಕರು ಡೇಟಾವನ್ನು ಸ್ವಂತ ಬಳಕೆ ಜೊತೆ ಬೇರೆಯವರಿಗೆ ವರ್ಗಾವಣೆ ಮಾಡಬಹುದು. ಸೆಪ್ಟೆಂಬರ್ 30ರವರೆಗೆ ಈ ಆಫರ್ ಇರಲಿದೆ.

ಜಿಯೋದ ಈ ಲಾಭ ಪಡೆಯಲು ಗ್ರಾಹಕರು ಸ್ಮಾರ್ಟ್ಫೋನ್ ನಲ್ಲಿ ಮೈ ಜಿಯೋ ಆ್ಯಪ್ ಹೊಂದಿರಬೇಕು. ಆ್ಯಪ್ ನ ಮುಖ್ಯ ಸ್ಕ್ರೀನ್ ನಲ್ಲಿಯೇ ಈ ಪ್ಲಾನ್ ಬಗ್ಗೆ ಮಾಹಿತಿಯಿದೆ. ಚಾಕೋಲೇಟ್ ನ 5 ರೂಪಾಯಿ, 10 ರೂಪಾಯಿ, 20 ರೂಪಾಯಿ, 40 ರೂಪಾಯಿ ಹಾಗೂ 100 ರೂಪಾಯಿ ರ್ಯಾಪರ್ ಮೇಲಿರುವ ಬಾರ್ ಕೋಡ್ ಬಳಸಿ ಡೇಟಾ ಪಡೆಯಬೇಕು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...