alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಪ್ಲಾನ್ ನಲ್ಲಿ ಆರು ತಿಂಗಳವರೆಗೆ ಉಚಿತವಾಗಿ ಸಿಗಲಿದೆ ಅನಿಯಮಿತ 4ಜಿ ಡೇಟಾ

ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಮತ್ತೊಂದಿಷ್ಟು ಭರ್ಜರಿ ಕೊಡುಗೆ ನೀಡಲು ಮುಂದಾಗಿದೆ. ಮಾನ್ಸೂನ್ ಹಂಗಾಮಾ ಹೆಸರಿನಲ್ಲಿ ಕಂಪನಿ ಕೆಲ ಪ್ಲಾನ್ ಶುರು ಮಾಡಿದೆ. ಮಾನ್ಸೂನ್ ಹಂಗಾಮಾದಲ್ಲಿ 594 ರೂ. ಪ್ಲಾನ್ ವಿಶೇಷತೆ ಹೊಂದಿದೆ.

ಜಿಯೋ ಮಾನ್ಸೂನ್ ಹಂಗಾಮಾದ 594 ರೂ. ಪ್ಲಾನ್ ನಲ್ಲಿ ಗ್ರಾಹಕರಿಗೆ ಆರು ತಿಂಗಳುಗಳ ಕಾಲ ಉಚಿತ ಕರೆ ಹಾಗೂ ಅನಿಯಮಿತ 4ಜಿ ಡೇಟಾ ಸಿಗಲಿದೆ. ಇದ್ರ ಜೊತೆಗೆ ಅನಿಯಮಿತ ಎಸ್ ಎಂಎಸ್ ಲಭ್ಯವಾಗಲಿದೆ. ಜಿಯೋ ತನ್ನ ಜಿಯೋ ಫೋನ್ ಬಳಕೆದಾರರಿಗಾಗಿಯೇ ಎರಡು ಹೊಸ ಪ್ಲಾನ್ ಶುರು ಮಾಡಿದೆ.

ಮಾನ್ಸೂನ್ ಹಂಗಾಮಾ ಆಫರ್ ನಲ್ಲಿ ಗ್ರಾಹಕರು ತಮ್ಮ ಹಳೆ ಫೀಚರ್ ಫೋನ್ ವಿನಿಮಯ ಮಾಡಿ ಹೊಸ ಜಿಯೋ ಫೋನ್ ಖರೀದಿ ಮಾಡಬಹುದಾಗಿದೆ. ಜಿಯೋ ಫೋನ್ ಬಳಕೆದಾರರಿಗೆ 99 ರೂಪಾಯಿ ಹೊಸ ಪ್ಲಾನ್ ಶುರು ಮಾಡಿದೆ. ಇದ್ರಲ್ಲಿ ಅನಿಯಮಿತ ವಾಯ್ಸ್ ಕಾಲಿಂಗ್ ಜೊತೆ ಉಚಿತ ಎಸ್ ಎಂ ಎಸ್ ಲಭ್ಯವಿದೆ. 500 ಎಂಬಿ 4ಜಿ ಡೇಟಾ ನೀಡಲಾಗಿದೆ. ಈ ಪ್ಲಾನ್ 28 ದಿನಗಳ ಕಾಲ ಸಿಂಧುತ್ವ ಹೊಂದಿರಲಿದೆ.

ಇನ್ನು 153 ರೂಪಾಯಿ ಪ್ಲಾನ್ ಕೂಡ ಜಿಯೋ ಪೋನ್ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆ ಮಾಡಲಾಗಿದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 1.5 ಜಿಬಿ ಡೇಟಾ ಲಭ್ಯವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...